ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ತಾಲ್ಲೂಕು ಶಾಖೆಗೆ ಈ ಕೆಳಕಂಡಂತೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಗೌರವಾಧ್ಯಕ್ಷರಾಗಿ ಮಾಡನಾಯಕನಹಳ್ಳಿ ಮುಖ್ಯ ಶಿಕ್ಷಕ ಶಶಿಧರ್ ಎನ್.ಆರ್. ಅಧ್ಯಕ್ಷರಾಗಿ ವಿಜಾಪುರ ಗೊಲ್ಲರಹಟ್ಟಿಯ ಸಹ ಶಿಕ್ಷಕ ಮೊಹಮದ್ ತಾಜೀರ್‌ಭಾಷ, ಉಪಾಧ್ಯಕ್ಷರುಗಳಾಗಿ ನೆಹರುನಗರದ ಅರುಂಧತಿ ಕೆ. ಅಲಿಮೊಹಲ್ಲಾದ ಪಿ.ಎಂ.ಇನಾಯತ್‌ವುಲ್ಲಾಷರೀಫ್, ಕಾರ್ಯದರ್ಶಿಯಾಗಿ ಚಿಕ್ಕಪುರ ಗೊಲ್ಲರಹಟ್ಟಿಯ ಹೆಚ್.ದೇವರಾಜ, ಕೋಶಾಧ್ಯಕ್ಷರಾಗಿ ಹಿರೇಗುಂಟನೂರು ಗೊಲ್ಲರಹಟ್ಟಿಯ ಗೋಪಿನಾಥ,
ಸಹ ಕಾರ್ಯದರ್ಶಿಯಾಗಿ ಪ್ರಸಾದ್ ಕೆ.ವಿ. ಸಂಘಟನಾ ಕಾರ್ಯದರ್ಶಿಗಳಾಗಿ ಗಿರಿಜಮ್ಮ ಆರ್. ಸುಮಾರೆಡ್ಡಿ, ಶಿವಕುಮಾರಸ್ವಾಮಿ ಜಿ.ಎಸ್. ವಿಶ್ವನಾಥ ಎಂ. ದಿನೇಶ್ ಎಲ್. ರಾಜಪ್ಪ ಕಳ್ಳಿಹಟ್ಟಿ. ನಿರ್ದೇಶಕರುಗಳಾಗಿ ನೂರ್‌ಫಾತಿಮ, ಭಾಗ್ಯಶ್ರಿ
ಡಾ.ತಿಪ್ಪೇಸ್ವಾಮಿ ಎ. ಹೆಚ್.ಎಂ.ಪರಮೇಶ್, ಪ್ರದೀಪ್ ವಿ. ವೆಂಕಟೇಶ್ ಆಚಾರ್, ಜಿ.ಎಲ್.ಶಿವಕುಮಾರ್, ಎಂ.ತಿಪ್ಪೇರುದ್ರಪ್ಪ, ಕೆ.ಶಿವರುದ್ರಪ್ಪ, ಪ್ರಸನ್ನ ಮಂಡೇಲಾ, ಸಲಹಾ ಸಮಿತಿ ಸದಸ್ಯರುಗಳಾಗಿ ಮಲ್ಲಿಕಾರ್ಜುನ ಎ., ಲೋಲಾಕ್ಷಮ್ಮ, ವಿಮಲಾಕ್ಷಿ, ಉಮೇಶಯ್ಯ ಇವರುಗಳನ್ನು ಪ್ರವಾಸಿ ಮಂದಿರದಲ್ಲಿ ನಡೆದ ಮಹಾಸಭೆಯಲ್ಲಿ ನೇಮಕ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಜಿಲ್ಲಾಧ್ಕಕ್ಷ ಎ.ಜಯಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ ಸಿ.ಎನ್. ಇವರುಗಳು ತಿಳಿಸಿದ್ದಾರೆ.