ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಯುವ ಕರ್ನಾಟಕ ವೇದಿಕೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ರೂಪೇಶ್ ರಾಜಣ್ಣ ಅನುಮತಿ ಮೇರೆಗೆ ರೈತ ಘಟಕದ ಮಹಿಳಾ ಜಿಲ್ಲಾಧ್ಯಕ್ಷೆಯಾಗಿ ಶಶಿಕಲಾ, ಉಪಾಧ್ಯಕ್ಷರಾಗಿ ಶಿವಮ್ಮ,
ಹಿರಿಯೂರು ತಾಲ್ಲೂಕು ಅಧ್ಯಕ್ಷರಾಗಿ ಲಕ್ಷ್ಮಿಕಾಂತ ಬಿ. ಚಿತ್ರದುರ್ಗ ತಾಲ್ಲೂಕು ಉಪಾಧ್ಯಕ್ಷರಾಗಿ ಸತೀಶ್, ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ್ ಇವರುಗಳನ್ನು ನೇಮಕ ಮಾಡಲಾಯಿತೆಂದು ಯುವ ಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷ ರವಿಕುಮಾರ್‌ನಾಯ್ಕ ತಿಳಿಸಿದ್ದಾರೆ.
ವೇದಿಕೆ ಕಾರ್ಯಾಧ್ಯಕ್ಷ ಓಬಣ್ಣ ಎನ್. ಜಿಲ್ಲಾ ಉಪಾಧ್ಯಕ್ಷ ನಂಜಣ್ಣ, ಕಾರ್ಮಿಕ ಘಟಕದ ಅಧ್ಯಕ್ಷ ಸೈಯದ್ ಅಲಿ, ಖಜಾಂಚಿ ಯಶವಂತ್, ಜಗದೀಶ್, ಸಚಿನ್, ನಾಗರಾಜ್, ನಾಗೇಶ್ ಟಿ. ಮಹೇಶ್ವರಪ್ಪ, ವಿನಯ್, ಗಿರೀಶ್ ಟಿ. ನಾಗರಾಜ್, ರವಿಕುಮಾರ್, ಮಂಜುನಾಥ್ ಇವರುಗಳು ಸಭೆಯಲ್ಲಿ ಭಾಗವಹಿಸಿದ್ದರು.