ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿ ಮಾಚಗೊಂಡನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಜಗನ್ನಾಥ್ ಎನ್ (ಆಡಿಟರ್) ಮತ್ತು ಉಪಾಧ್ಯಕ್ಷರಾಗಿ ಮಂಜುನಾಥ ಎ ಅವರು ಅವಿರೋಧವಾಗಿ ಆಯ್ಕೆಯಾದರು.
ಮಾಚಗೊಂಡನಹಳ್ಳಿ ವಿ.ಎಸ್.ಎಸ್.ಎನ್‌ಗೆ 02-03- 2025 ರಂದು ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ 12 ಸದಸ್ಯರು ಜಯಗಳಿಸಿದ್ದರು. ಮಾರ್ಚ್ 12ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಜಗನ್ನಾಥ್ ಎನ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಂಜುನಾಥ ಎ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ನಾಗಭೂಷಣ ಎಂ ರವರು ಅವಿರೋಧವಾಗಿ ಆಯ್ಕೆಮಾಡಿದರು.
ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಮುಖಂಡರು ಹೂವಿನ ಹಾರಗಳನ್ನು ಹಾಕುವುದರ ಮೂಲಕ ಸಿಹಿಹಂಚಿ ಸಂಭ್ರಮಿಸಿದರು.
ನೂತನ ಅಧ್ಯಕ್ಷರಾದ ಜಗನ್ನಾಥ್ ಎನ್ ಮಾತನಾಡಿ ಮುಂದಿನ 5 ವರ್ಷಗಳವರೆಗೆ ನಡೆದ ಮಾಚಗೊಂಡನಹಳ್ಳಿ ವಿ.ಎಸ್.ಎಸ್.ಎನ್ ಚುನಾವಣೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ನಾನು ಅಧ್ಯಕ್ಷನಾಗಿ ಮತ್ತು ಉಪಾಧ್ಯಕ್ಷರಾಗಿ ಮಂಜುನಾಥ ಎ ಅವರನ್ನು ಎಲ್ಲಾ ಸದಸ್ಯರು ಒಮ್ಮತದಿಂದ ಅವಿರೋಧವಾಗಿ ಆಯ್ಕೆ ಮಾಡಿದರು.
ಅವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಎಲ್ಲಾ ಸದಸ್ಯರನ್ನು ಒಗ್ಗೂಡಿಸಿಕೊಂಡು ವಿ.ಎಸ್.ಎಸ್.ಎನ್ ಶ್ರಮಿಸುವುದಾಗಿ ಹೇಳಿದರು.
ಇದೇ ವೇಳೆ ತೆಂಗುನಾರು ಮಂಡಳಿ ಅಧ್ಯಕ್ಷ ವೆಂಕಟೇಶ್ ಬಾಬು, ಹೆಗ್ಗಡಿಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಮಂಜುಳಾ ಸುರೇಶ್, ಮಾಜಿ ಅಧ್ಯಕ್ಷ ಮಂಜುನಾಥ್, ಜೆ.ಡಿ.ಎಸ್ ಮುಖಂಡರಾದ ಬೀಡಿಕೆರೆ ಗೌರೀಶ್, ಮುಕ್ಕೇನಹಳ್ಳಿ ಕುಮಾರ, ಹಾಡೋನಹಳ್ಳಿ ಮುನೇಗೌಡ, ನಿರ್ದೇಶಕರಾದ ಜಗನ್ನಾಥ್.ಎನ್, ಗೋಪಾಲ್ ರೆಡ್ಡಿ, ಜನಾರ್ದನ.ಎಂ, ಮುನಿ ನಾರಾಯಣ, ವೆಂಕಟೇಶ್, ಕೃಷ್ಣಮೂರ್ತಿ, ಭಾಗ್ಯಮ್ಮ, ಸುನಂದಮ್ಮ, ಮುನಿರಾಜು, ನಾರಾಯಣಪ್ಪ, ರಕ್ಷಿತ್ ಇನ್ನು ಜೆಡಿಎಸ್ ಮುಖಂಡರು ಹಾಜರಿದ್ದರು.