ಸ್ವಯಂ ಘೋಷಿತ ಅಹಿಂದ ನಾಯಕ ಸಿದ್ದರಾಮಯ್ಯ ಸ್ಕಾಲರ್‌ ಶಿಪ್‌ ಕೊಡಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ವಯಂ ಘೋಷಿತ ಅಹಿಂದ ನಾಯಕ ಸಿದ್ದರಾಮಯ್ಯ ನವರೇ, ಇದೇನಾ ನೀವು ಹಿಂದುಳಿದ, ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ಕೊಡುವ ನ್ಯಾಯ? ತಳಸಮುದಾಯಗಳ ಮಕ್ಕಳಿಗೆ ಕಲ್ಪಿಸುವ ಶಿಕ್ಷಣದ ಸೌಲಭ್ಯ ಹೀಗೇನಾ? ಎಂದು ಜೆಡಿಎಸ್ ತೀಕ್ಷ್ಣವಾಗಿ ಸಿಎಂ ಸಿದ್ದರಾಮಯ್ಯ ಅವರನ್ನ ಪ್ರಶ್ನಿಸಿದೆ.

ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸಿ ರಾಜಕೀಯ ಬೇಳೆ ಬೇಯಿಸಿಕೊಂಡ ನೀವು, ನಿಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಕಳೆದ 2 ವರ್ಷಗಳಿಂದ ಬಡ ಹಿಂದುಳಿದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ಕೊಡುವ ಯೋಗ್ಯತೆ ಇಲ್ಲದಿರುವುದು ನಾಚಿಕೆಗೇಡು.

- Advertisement - 

ಗ್ಯಾರಂಟಿಯಿಂದ ಆರ್ಥಿಕ ಸುಧಾರಣೆಯಾಗಿದೆ ಎಂದು ಬುರುಡೆ ಬಿಡುತ್ತೀರಿ. ಆದರೆ, 2023-24 ಮತ್ತು 2024-25 ಶೈಕ್ಷಣಿಕ ವರ್ಷದಲ್ಲಿ ರಾಜ್ಯದ 1.6 ಲಕ್ಷ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಎರಡು ವರ್ಷದಿಂದ ವಿದ್ಯಾರ್ಥಿ ವೇತನ ನೀಡದೆ ಅವರ ಭವಿಷ್ಯಕ್ಕೆ ಕಲ್ಲು ಹಾಕಿದ್ದೀರಿ. ಇದು ಅನ್ಯಾಯವಲ್ಲವೇ ಸೋಕಾಲ್ಡ್ ಅಹಿಂದರಾಮಯ್ಯ!!

ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಶಿವರಾಜ ತಂಗಡಗಿ ಅವರೇ ವಿಳಂಬ ದ್ರೋಹದ ಧೋರಣೆ ಬಿಟ್ಟು ತಕ್ಷಣವೇ ಬಾಕಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ಕೊಡಿ. ಕೊನೇ ಪಕ್ಷ ನಿಮ್ಮ ಗೌರವ ಉಳಿಸಿಕೊಳ್ಳಿ ಎಂದು ಜೆಡಿಎಸ್ ತಾಕೀತು ಮಾಡಿದೆ.

- Advertisement - 

Share This Article
error: Content is protected !!
";