ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ಹಿರಿಯ ಜೆಡಿಎಸ್ ಮುಖಂಡ ಹಾಡೋನಹಳ್ಳಿ ಅಪ್ಪಯ್ಯಣ್ಣ ನವರು ತೀವ್ರ ಹೃದಯಘಾತದಿಂದ ಶನಿವಾರ ಬೆಳಿಗ್ಗೆ ಮೃತ ಪಟ್ಟಿದ್ದಾರೆ.
82ವರ್ಷ ವಯಸ್ಸಿನ ಅಪ್ಪಯ್ಯಣ್ಣ ನವರು ಒಬ್ಬ ಪುತ್ರ ಹಾಗು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕೆಲವು ತಿಂಗಳ ಹಿಂದೆ ಪತ್ನಿ ತೀರಿಕೊಂಡಿದ್ದರು.
ಸುಮಾರು ನಾಲ್ಕು ದಶಕಗಳ ಕಾಲ ರಾಜಕಾರಣದಲ್ಲಿದ್ದ ಅಪ್ಪಯ್ಯಣ್ಣ ನವರು ಜನತಾ ಪರಿವಾರದ ನಿಷ್ಠಾವಂತ ಕಾರ್ಯಕರ್ತರಾಗಿ ರಾಜಕಾರಣಕ್ಕೆ ಬಂದವರು. ಪ್ರಸ್ತುತ ಬೆಂಗಳೂರು ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷರಾಗಿದ್ದ ಅವರು ಹಾಡೋನಹಳ್ಳಿ ಗ್ರಾ. ಪಂ. ಅಧ್ಯಕ್ಷ, ಬಮುಲ್ ಅಧ್ಯಕ್ಷ,ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಲಯನ್ಸ್ ಕ್ಲಬ್ ಅಧ್ಯಕ್ಷ, ತಾಲೂಕು ಜೆಡಿಎಸ್ ಅಧ್ಯಕ್ಷ ಸ್ಥಾನ ಸೇರಿದಂತೆ ಹಲವಾರು ಹುದ್ದೆಗಳನ್ನು ಅಲಂಕರಿಸಿ ದೊಡ್ಡಬಳ್ಳಾಪುರ ರಾಜಕಾರಣದಲ್ಲಿ ತಮ್ಮದೇ ಚಾ ಪನ್ನು ಉಳಿಸಿ ಕೊಂಡಿದ್ದರು.
ಹಿರಿಯ ಮುತ್ಸದ್ದಿ ಅಪ್ಪಯ್ಯಣ್ಣನವರ ನಿಧನಕ್ಕೆ ಮಾಜಿ ಶಾಸಕ ಅಪಕಾರನಹಳ್ಳಿ ವೆಂಕಟರಮಣಯ್ಯ, ಡಿ. ಪಿ. ಎ ಅಧ್ಯಕ್ಷ ಚುಂಚೆಗೌಡ ಜೆಡಿಎಸ್ ಅಧ್ಯಕ್ಷ ಲಕ್ಷ್ಮೀಪತಯ್ಯ, ಬಿ. ಮುನೇಗೌಡ, ಹರೀಶ್ ಗೌಡ, ಕುರುವಿಗೆರೆ ನರಸಿಂಹಯ್ಯ, ತ.ನಾ. ಪ್ರಭುದೇವ್, ವಡ್ಡರಹಳ್ಳಿ ರವಿ, ರೈಲ್ವೇ ಸ್ಟೇಷನ್ ಮಲ್ಲೇಶ್, ಗಂಟಿಗಾನಹಳ್ಳಿ ವೆಂಕಟೇಶ್ ಬಾಬು, ಬಿ. ಸಿ. ಆನಂದ್, ಪದ್ಮನಾಭ ಕುಂಟನಹಳ್ಳಿ ಮಂಜುನಾಥ್ ಸೇರಿದಂತೆ ತಾಲೂಕಿನ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.