ಹಿರಿಯ ವಕೀಲ ಡಾ.‌ನರಹರಿ ಇನ್ನಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಹರಿಹರಗುರು ಅಡ್ವೋಕೇಟ್ಸ್ ಅಂಡ್ ಅಸೋಸಿಯೇಟ್ಸ್ ನ ಹಿರಿಯ ವಕೀಲರಾದ
ಡಾ. ಎಂ.ಸಿ.ನರಹರಿ (53) ಅವರು  ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ.

ಕೇವಲ ಎರಡು ದಿನಗಳ ಹಿಂದಷ್ಟೇ ಅನಾರೋಗ್ಯಕ್ಕೆ ತುತ್ತಾಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾಯಿ ಮತ್ತು ಪತ್ನಿ ಇಬ್ಬರು ಮಕ್ಕಳು ಹಾಗೂ ಅಪಾರ ಮಿತ್ರಬಳಗ ಬಂಧು ಬಳಗವನ್ನು ಅಗಲಿದ್ದಾರೆ.

ಚಿತ್ರದುರ್ಗದ ಕೆಳಗೋಟೆ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸ್ವಗ್ರಾಮ ರಾಷ್ಟ್ರೀಯ ಹೆದ್ದಾರಿ ಪಕ್ಕದ ಬುರುಜಿನರೊಪ್ಪ ಸಮೀಪದ ಮರಡಿಹಳ್ಳಿಯಲ್ಲಿ ನಡೆಯಲಿದೆ ಎಂದು ಆತ್ಮೀಯ ಒಡನಾಡಿ ಮಿತ್ರ ಟಿ.ಡಿ.ಗುರುನಾಥ್  ಅವರು ತಿಳಿಸಿದ್ದಾರೆ.

ಡಾ. ಎಂ.ಸಿ.ನರಹರಿ ಕೇವಲ ವಕೀಲರಾಗಿ ಸೇವೆ ಸಲ್ಲಿಸದೆ ಹಲವು ರಂಗಗಳಲ್ಲಿ ತನ್ನನ್ನು ಗುರುತಿಸಿಕೊಂಡಿದ್ದರು. ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರಲ್ಲದೆ, ಗಾಯಕರು, ರಂಗಭೂಮಿ ನಟ, ಅಂಬೇಡ್ಕರ್ ಚಿಂತಕ, ಮೀಸಲಾತಿ ಹೋರಾಟಗಾರರು, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು.

ಎರಡು ದಶಕಗಳ ಹಿಂದೆ ಬೆಂಗಳೂರಿನಲ್ಲಿ ಕನ್ನಡ ಪ್ರಭ ವರದಿಗಾರರಾಗಿದ್ದರು. ಚಿತ್ರದುರ್ಗ ನಗರದ ಕೆಳಗೋಟೆಯ ಐತಿಹಾಸಿಕ ಚನ್ನಕೇಶವ ದೇವಸ್ಥಾನ ಸಮಿತಿಯ ಧರ್ಮದರ್ಶಿಯಾಗಿ ಧಾರ್ಮಿಕ ಸೇವಾ ಕಾರ್ಯದಲ್ಲಿ ನಿರತರಾಗಿದ್ದರು‌. ಒಳಮೀಸಲಾತಿ ಹೋರಾಟಗಾರದಲ್ಲಿ ಸಕ್ರಿಯವಾಗಿ ಜಾಗೃತಿ ಮೂಡಿಸಿದ್ದರು.

 

 

Share This Article
error: Content is protected !!
";