ಮನೆ ಅಂಗಳದಲ್ಲಿ ಹಿರಿಯ ಸಾಹಿತಿ ಡಾ .ಬಿ .ಎಲ್ .ವೇಣು ಹುಟ್ಟು ಹಬ್ಬ 

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿ ಜನಪ್ರಿಯತೆ ಹೆಚ್ಚಿಸಿಕೊಂಡುರುವ ನಾಡಿನ ಹೆಮ್ಮೆಯ ಸಾಹಿತಿ ಡಾ .ಬಿ ಎಲ್.ವೇಣು ಅವರ ಹುಟ್ಟು ಹಬ್ಬವನ್ನು ಅವರ ಮನೆಯಂಗಳದಲ್ಲಿ ಮೇ.27ರ ಮಂಗಳವಾರ  ಬೆಳಿಗ್ಗೆ 11.45ಕ್ಕೆ ಆಚರಿಸಲು ತೀರ್ಮಾನಿಸಲಾಗಿದೆ .

- Advertisement - 

ಸೃಷ್ಟಿಸಾಗರ ಪ್ರಕಾಶನ ಹಾಗೂ ಮದಕರಿ ನಾಯಕ ಸಾಂಸ್ಕೃತಿಕ ಕೇಂದ್ರ ಇವರ ಸಹಯೋಗದಲ್ಲಿ ಎಂದಿನಂತೆ ಈ ವರ್ಷವೂ ಬಿ .ಎಲ್.ವೇಣು ಅವರ ಜನುಮ ದಿನ ಆಚರಿಸಲಾಗುವುದು.

- Advertisement - 

ಸರಳ ಕಾರ್ಯಕ್ರಮದಲ್ಲಿ ವೇಣು ಅವರ ಅಭಿಮಾನಿಗಳು, ಸಾಹಿತಿಗಳು, ಜನಪರ ಹೋರಾಟಗಾರರು ಭಾಗವಹಿಸಬೇಕೆಂದು ಮದಕರಿ ನಾಯಕ ಸಾಂಸ್ಕೃತಿಕ ಕೇಂದ್ರದ ಡಿ .ಗೋಪಾಲಸ್ವಾಮಿ ನಾಯಕ ಹಾಗೂ ಸೃಷ್ಟಿ ಸಾಗರ ಪ್ರಕಾಶನ ಮುಖ್ಯಸ್ಥ ಮೇಘ ಗಂಗಾಧರ ನಾಯ್ಕ ಮನವಿ ಮಾಡಿದ್ದಾರೆ.

 

- Advertisement - 

Share This Article
error: Content is protected !!
";