ಸೆ.11: ರಾಷ್ಟ್ರ ಭಕ್ತರ ಬಳಗದಿಂದ ಚಂದ್ರಶೇಖರನ್ ಕುಟುಂಬಕ್ಕೆ ಪರಿಹಾರ ವಿತರಣೆ

khushihost

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ : ಈ ಹಿಂದೆ ತಾನು ಘೋಷಿಸಿದಂತೆ “ರಾಷ್ಟ್ರಭಕ್ತರ ಬಳಗದ ಸದಸ್ಯರು ದೇಣಿಗೆಯಾಗಿ ನೀಡಿದ 5,00,000-00 (ಐದು ಲಕ್ಷ) ರೂಪಾಯಿಗಳನ್ನು ‌ಸೆ. 11 ರ ಬುಧವಾರ ಬೆಳಿಗ್ಗೆ 11:30 ಗಂಟೆಗೆ ಶಿವಮೊಗ್ಗದ ವೀರಣ್ಣ ಲೇಔಟ್‌ನಲ್ಲಿರುವ ಮೃತರ ಮನೆಗೆ ತಲುಪಿಸಲಾಗುವುದು ಎಂದು ಮಾಜಿ ಡಿಸಿಎಂ  ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಈ ಸತ್ಕಾರ್ಯದಲ್ಲಿ “ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರೊಂದಿಗೆ ಜವಾಬ್ದಾರಿಯುತ ಶಿವಮೊಗ್ಗದ ಜನತೆ ಪಾಲ್ಗೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಕುಟುಂಬಕ್ಕೆ “ರಾಷ್ಟ್ರಭಕ್ತರ ಬಳಗ”ದಿಂದ 5 ಲಕ್ಷ ರೂಪಾಯಿ ಧನ ಸಹಾಯ ಮಾಡುವಲ್ಲಿ ಸಹಕರಿಸಿದ್ದಾರೆ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಕೋಟ್ಯಾಂತರ ರೂಪಾಯಿ ಹಣಕಾಸಿನ ಅವ್ಯವಹಾರ ಹೊರಬರಲು ಪ್ರಮುಖ ಕಾರಣರಾದ ನಿಗಮದ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರನ್ ಅವರು ಆತ್ಮಹತ್ಯೆ ಮಾಡಿಕೊಂಡು ಹಲವು ತಿಂಗಳುಗಳೇ ಕಳೆದರೂ, ಅವರ ಕುಟುಂಬಕ್ಕೆ ಸರ್ಕಾರ ಘೋಷಿಸಿದ 25,00,000-00 (ಇಪ್ಪತೈದು ಲಕ್ಷ) ರೂಪಾಯಿ ಪರಿಹಾರ ಇನ್ನೂ ಮೃತರ ಪತ್ನಿಗೆ ತಲುಪಿಲ್ಲ ಎಂದ ಅವರು, ಈ ಸಂಬಂಧವಾಗಿ “ರಾಷ್ಟ್ರಭಕ್ತರ ಬಳಗ”ದ ಪರವಾಗಿ ತಾನು ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ ಬಳಿ ಮಾತನಾಡಿದಾಗ ಅವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಪರಿಹಾರದ ಹಣವನ್ನು ಬಿಡುಗಡೆಗೊಳಿಸಲು ಕ್ರಮವಹಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಇದುವರೆಗೂ ಮೃತರ ಕುಟುಂಬಕ್ಕೆ ಹಣ ಸಂದಾಯವಾಗಿಲ್ಲ ಎಂದರು.

ಈ ವಿಷಯಕ್ಕೆ ಸಂಬಂಧಿಸಿದಂತೆ “ರಾಷ್ಟ್ರಭಕ್ತರ ಬಳಗ ಇತ್ತೀಚೆಗೆ ಶಿವಮೊಗ್ಗದ ಜಿಲ್ಲಾಧಿಕಾರಿ ಕಛೇರಿಯ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಪರಿಹಾರ ನೀಡುವುದಾಗಿ ಘೋಷಿಸಲಾಗಿತ್ತು. ಆ ಪ್ರಕಾಎ ನಾಡಿದ್ದು ನೀಡಲಾಗುವುದು ಎಂದರು.

ಈ ಸಂಬಂಧವಾಗಿ ಸರ್ಕಾರದಿಂದ ಬರುವ ಪರಿಹಾರದ ಹಣ ಬಸೆ. 20 ಒಳಗಾಗಿ ತಲುಪದಿದ್ದರೆ ತನ್ನ ನೇತೃತ್ವದಲ್ಲಿ “ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕುವುದರ ಮೂಲಕ “ಜೈಲ್ ಭರೋ” ಚಳುವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದರು.

- Advertisement -  - Advertisement - 
Share This Article
error: Content is protected !!
";