ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
‘ದುರ್ಭಿಕ್ಷದಲ್ಲಿ ಅಧಿಕ ಮಾಸ‘ ಎಂಬಂತೆ ಈಗಾಗಲೇ ಆದಾಯ ಇಲ್ಲದೇ ಸೊರಗಿ ದಿವಾಳಿ ಆಗಿರುವ ರಾಜ್ಯ ಸರ್ಕಾರಕ್ಕೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪದೇ ಪದೇ ಆಗುತ್ತಿರುವ ಸರ್ವರ್ ಸಮಸ್ಯೆ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟು ಮಾಡುವುದರ ಜೊತೆಗೆ ಸಾರ್ವಜನಿಕರಿಗೂ ತೊಂದರೆ ಕೊಡುತ್ತಿದೆ ಎಂದು ಆರ್.ಅಶೋಕ್ ಆರೋಪಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಘನ ಸರ್ಕಾರದಲ್ಲಿ ಒಂದಾದರೂ ಇಲಾಖೆ ನೆಟ್ಟಗೆ ಕೆಲಸ ಮಾಡುತ್ತಿದೆಯಾ? ಒಬ್ಬ ಮಂತ್ರಿಯಾದರೂ ಸರಿಯಾಗಿ ಕೆಲಸ ಮಾಡುತ್ತಿದ್ದಾರಾ?
ಈ ನಾಲಾಯಕ್ ಸರ್ಕಾರ ಕರ್ನಾಟಕಕ್ಕೆ ಹಿಡಿದಿರುವ ಗ್ರಹಣ, ಕನ್ನಡಿಗರಿಗೆ ಅಂಟಿರುವ ಶಾಪ. ಈ ಸರ್ಕಾರ ತೊಲಗುವವರೆಗೂ ರಾಜ್ಯ ಜನತೆಗೆ ನೆಮ್ಮದಿ ಇಲ್ಲ ಎಂದು ಆರ್.ಅಶೋಕ್ ಕಿಡಿಕಾರಿದ್ದಾರೆ.