ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹದಿನಾರನೇ ವಿಧಾನಸಭೆಯ ಎಂಟನೇ ಅಧೀವೇಶನವು 2025 ನೇ ಡಿಸೆಂಬರ್ 8 ರಂದು ಪೂರ್ವಾಹ್ನ 11.00 ಗಂಟೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಸಮಾವೇಶಗೊಳ್ಳಲಿದೆ.
ಡಿಸೆಂಬರ್ 8 ರಿಂದ 10, 12, 15 ರಿಂದ 17 ಮತ್ತು 19 ರಂದು ಸರ್ಕಾರಿ ಕಾರ್ಯಕಲಾಪಗಳು ಜರುಗಲಿವೆ. ಡಿಸೆಂಬರ್ 11 ಮತ್ತು 18 ರಂದು ಸರ್ಕಾರಿ ಮತ್ತು ಖಾಸಗಿ ಕಾರ್ಯಕಲಾಪಗಳು ಜರುಗಲಿವೆ.
ಡಿಸೆಂಬರ್ 13 ಎರಡನೇ ಶನಿವಾರ ಮತ್ತು ಡಿಸೆಂಬರ್ 14 ಭಾನುವಾರದಂದು ಕಲಾಪಗಳು ಇರುವುದಿಲ್ಲ ಎಂದು ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

