ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ಸುರಕ್ಷತೆಯ ಗ್ಯಾರಂಟಿ ಇಲ್ಲವಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರತಿ ದಿನ ಲೈಂಗಿಕ ದೌರ್ಜನ್ಯದಂತಹ ಅಮಾನವೀಯ, ಪೈಶಾಚಿಕ ಪ್ರಕರಣಗಳು ಮರುಕಳಿಸುತ್ತಲೇ ಇದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳು ನಿಮಗೆ ಸಣ್ಣ ಘಟನೆಯೇ ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೇ, ನೀವೊಬ್ಬ “ನಾಲಾಯಕ್‌ಗೃಹ ಮಂತ್ರಿ” ಎಂಬುದನ್ನು ಸ್ವತಃ ನಿಮ್ಮ ಬೇಜಾವಾಬ್ದಾರಿ ಹೇಳಿಕೆಗಳಿಂದಲೇ ಮತ್ತೆ ಮತ್ತೆ ಸಾಬೀತು ಮಾಡಿಕೊಳ್ಳುತ್ತಿದ್ದೀರಿ.
ಕಾಂಗ್ರೆಸ್‌ಆಡಳಿತದಲ್ಲಿ ಗೃಹ ಇಲಾಖೆ ನಿರ್ವಹಣೆಯಲ್ಲಿ ನಿಷ್ಕ್ರೀಯವಾಗಿದ್ದು ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಪಾತಳಕ್ಕೆ ಕುಸಿದಿದೆ ಎಂದು ಜೆಡಿಎಸ್ ಆರೋಪಿಸಿದೆ.
ಪೊಲೀಸರ ಭಯವಿಲ್ಲದೇ ಕಾಮುಕರು, ಬೀದಿ ಕಾಮಣ್ಣರು, ಪುಂಡರು, ರೌಡಿಗಳ ಹಾವಳಿ ಮೀತಿ ಮೀರಿದ್ದು, ಮಹಿಳೆಯರು, ಹೆಣ್ಣುಮಕ್ಕಳಿಗೆ ರಕ್ಷಣೆ ಮರೀಚಿಕೆಯಾಗಿದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.