ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ತಾಲ್ಲೂಕು ತೇಕಲವಟ್ಟಿ ಗೊಲ್ಲರಹಟ್ಟಿ ಗ್ರಾಮದ ನಿವಾಸಿ ಶೈಲಜಾ ಎಂಬ ಬಾಲಕಿ 2025ರ ಮಾರ್ಚ್ 19ರಂದು ಕಾಣೆಯಾಗಿರುವ ಪ್ರಕರಣ ಹೊಳಲ್ಕೆರೆ ತಾಲ್ಲೂಕು ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾಣೆಯಾದ ಬಾಲಕಿಯ ಚಹರೆ ಇಂತಿದೆ. ಶೈಲಜಾ ತಂದೆ ಶಿವಪ್ಪ, 17 ವರ್ಷ, 5 ಅಡಿ ಎತ್ತರವಿದ್ದು, ಎಣ್ಣೆಗೆಂಪು ಬಣ್ಣ ಹೊಂದಿದ್ದಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಹಳದಿ ಚುಕ್ಕಿಗಳಿರುವ ಚೂಡಿದಾರ ಧರಿಸುತ್ತಾರೆ.
ಈ ಮೇಲ್ಕಂಡ ಚಹರೆವುಳ್ಳ ಬಾಲಕಿ ಪತ್ತೆಯಾದಲ್ಲಿ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪೊಲೀಸ್ ಉಪನಿರೀಕ್ಷಕರು ಮನವಿ ಮಾಡಿದ್ದಾರೆ.