ಶಿವಮೊಗ್ಗ : ಜನಮೆಚ್ಚುವ ಶಿಕ್ಷಕನಿಗಿಂತ ಮನಮೆಚ್ಚುವ ಶಿಕ್ಷಕನಾಗಿ ಎಂದು ಇಳಕಲ್ ನ ನಿವೃತ್ತ ಪ್ರಾಚಾರ್ಯ, ವಿದ್ವಾಂಸ ಶಂಭು ಬಳಿಗಾರ್ ಹೇಳಿದರು.
ಅವರು ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಶಿಕ್ಷಕರು ತಮಗೆ ಸಂತೃಪ್ತಿಯಾಗುವಂತೆ ಕೆಲಸ ಮಾಡಬೇಕು. ಪಾಠಕ್ಕೆ ಮೊದಲು
ಸೂಕ್ತ ತಯಾರಿ ಮಾಡಿಕೊಳ್ಳಬೇಕು. ಪ್ರತಿದಿನ ಮಾರನೆಯ ದಿನದ ಪಾಠದ ಬಗ್ಗೆ ಓದಿಕೊಳ್ಳಬೇಕು. ಸತತ ಅಧ್ಯಯನದಿಂದ ಯಶಸ್ವಿ ಶಿಕ್ಷಕನಾಗಲು ಸಾಧ್ಯ ಎಂದರು.
ತರಗತಿಗೆ ಹೋಗುವ ಮುನ್ನತಯಾರಿ ಅತ್ಯಗತ್ಯ.
ರಾತ್ರಿ ಓದು ಅವಶ್ಯ.
ಕಲಿಸಿದ್ದು ತೃಪ್ರಿ ಕೊಟ್ಟಿದೆಯೇ ಯೋಚಿಸಿ ಎಂದ ಅವರು,
ಪ್ರಶಸ್ತಿ ಬಂದವರಷ್ಟೇ ಒಳ್ಳೆಯ ಶಿಕ್ಷಕರು ಎಂದಲ್ಲ.
ಪ್ರಶಸ್ತಿ ಬರಲಿಲ್ಲ ಎಂದು ಎದೆಗುಂದಬಾರದು. ನಮ್ಮ ಕೆಲಸದಲ್ಲಿ ನಾವು ಕಾರ್ಯತ್ಪರರಾಗಬೇಕೆಂದರು.
ಸಜ್ಜನಿಕೆ, ಒಳ್ಳೆಯನ, ಪ್ರಾಮಾಣಿಕತೆ, ಮಾನವೀಯ ಮೌಲ್ಯ ಬಿತ್ತಿ. ವಿನಯ, ಸಂಬಂಧಗಳ ಬಗ್ಗೆ ಕಲಿಸಿ. ಈ ಬಗ್ಗೆ ಸಣ್ಣ ಉದಾಹರಣೆ ಕೊಡಿ. ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದರು.