ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಕಚೇರಿಯಲ್ಲಿ ಶಿವಮೊಗ್ಗ ಹಾಸನ ಚಿಕ್ಕಮಂಗಳೂರು ಹಾಗೂ ತಾಲೂಕು ಪತ್ರಿಕಾ ವಿತರಕರ ಪದಾಧಿಕಾರಿಗಳಿಂದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ವಿಶೇಷ ಸಭೆಯಲ್ಲಿ ರಾಜ್ಯಾಧ್ಯಕ್ಷ ಕೆ ಶಂಭುಲಿಂಗ ಮಾತನಾಡಿ ಪತ್ರಿಕಾ ವಿತರಕರ ಬೇಡಿಕೆಗಳು, ಹೋರಾಟದ ರೂಪುರೇಷೆಗಳ ಬಗ್ಗೆ, ಸಭೆಯಲ್ಲಿ ಚರ್ಚಿಸಿದರು.
ಜಿಲ್ಲೆಯ ಎಲ್ಲಾ ಪತ್ರಿಕಾ ವಿತರಕರು ಕಡ್ಡಾಯವಾಗಿ ಈ ಶ್ರಮ ಕಾರ್ಡನ್ನು ಮಾಡಿಸಿಕೊಳ್ಳುವಂತೆ ಕರೆ ನೀಡಿದರು.
ಮತ್ತು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗೆ, ಸರ್ಕಾರದಿಂದ ಪಡೆಯಬೇಕಾಗಿರುವ ಸೌಲಭ್ಯಗಳ ಬಗ್ಗೆ, ಸಭೆಯಲ್ಲಿ ಮಾಹಿತಿ ನೀಡಿ ಸಂಘಟನೆಯನ್ನು ಬಲಪಡಿಸುವ ಬಗ್ಗೆ ಚರ್ಚೆ ಮಾಡಿದರು.
ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಎನ್.ಮಾಲತೇಶ್ ಮಾತನಾಡಿ ಪತ್ರಿಕಾ ವಿತರಕರಿಗೆ ಸಿಗಬೇಕಾದ ಸೌಲಭ್ಯಗಳು ಸೇರಿದಂತೆ ಅಗತ್ಯ ಬೇಡಿಕೆಗಳ ಬಗ್ಗೆ ರಾಜ್ಯಮಟ್ಟದಲ್ಲಿ ಅಧ್ಯಕ್ಷರ ನೇತೃತ್ವದಲ್ಲಿ ನಡೆಯುವ ಸಭೆ ಅಧ್ಯಕ್ಷರ ನೇತೃತ್ವದಲ್ಲಿ ನಡೆಯುವ ಸಭೆ ಸಮಾರಂಭಗಳಲ್ಲಿ ಜಿಲ್ಲೆಯ ಏಳು ತಾಲೂಕುಗಳಿಂದಲೂ ಕೂಡ ಪತ್ರಿಕಾ ವಿತರಕರನ್ನು ಸಂಘಟಿಸಿ ರಾಜ್ಯಾಧ್ಯಕ್ಷರ ಕೈ ಬಲಪಡಿಸಲು ಸಿದ್ದರಿದ್ದೇವೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಕ್ತರ್ ಆಹ್ಮದ್ ನಾಜೀರ್ ಸ್ವಾಗತಿಸಿದರು. ಶಿವಮೊಗ್ಗ ಜಿಲ್ಲಾ ಗೌರವಾಧ್ಯಕ್ಷ ಹುಲಗಿ ಕೃಷ್ಣ ವಂದಿಸಿದರು.
ಶಿವಮೊಗ್ಗ, ಚಿಕ್ಕಮಂಗಳೂರು ಮತ್ತು ಹಾಸನ ಜಿಲ್ಲೆಯ ಪತ್ರಿಕಾ ವಿತರಕ ಮುಖಂಡರು ಕೂಡ ಭಾಗವಹಿಸಿದ್ದರು.
ಸಭೆಯಲ್ಲಿ ಶಿವಮೊಗ್ಗ ಜಿಲ್ಲೆಯ ಉಪಾಧ್ಯಕ್ಷರಾದ ರಾಮು,ಜಿ, ನಾಗಭೂಷಣ್ ಭದ್ರಾವತಿ ಪರಶುರಾಮ್ ರಾವ್, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್, ಮಧು, ಸೋಮಶೇಖರ್, ರಾಜಾವರ್ಮಾ ಜೈನ್, ದುರ್ಘೋಜಿ, ಪಾರ್ಥ ಬನ್, ಪ್ರಶಾಂತ್, ಶಿಕಾರಿಪುರದ ತಾಲೂಕು ಅಧ್ಯಕ್ಷ ಗಜೇಂದ್ರ, ಎಚ್.ಎಫ್ ಯಾವಗಲ್ ಹನುಮಂತಪ್ಪ, ಅಜಿದ್ ಉಲ್ಲಾ ಸೇರಿದಂತೆ ಹಲವು ಪತ್ರಿಕಾ ವಿತರಕರು ಸಭೆಯಲ್ಲಿ ಭಾಗವಹಿಸಿದ್ದರು.

