ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಸಾಕ್ಷ್ಯ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಡೆತ್‌ನೋಟ್‌ನಲ್ಲಿ ಸಚಿವ ಪ್ರಿಯಾಂಕ್‌ಖರ್ಗೆಯವರ ಆಪ್ತರ ಹೆಸರಿದೆ. ಆ ಆಪ್ತರಿಗೆ ಖರ್ಗೆ ʼಬಾಸ್ʼಆಗಿರುವುದರಿಂದಲೇ ಇನ್ನೂ ಆರೋಪಿಗಳ ಬಂಧನವಾಗಿಲ್ಲ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರ ಮೇಲೆ ಆರೋಪ ಬಂದ ಕೂಡಲೇ ಮಾಧ್ಯಮದೆದುರು ಬಂದು ತನಿಖಾಧಿಕಾರಿ, ನ್ಯಾಯಾಧೀಶರಂತೆ ವರ್ತಿಸಿದ್ದ ಮರಿ ಖರ್ಗೆ ಇಂದು ತಮ್ಮ ಮೇಲೆ ಆರೋಪ ಬಂದಾಗ ಮಾತ್ರ ಸಾಕ್ಷ್ಯದ ನೆಪ ಒಡ್ಡುತ್ತಿದ್ದಾರೆ ಎಂದು ಬಿಜೆಪಿ ದೂರಿದೆ.
ಸರ್ಜಿಕಲ್‌ಸ್ಟ್ರೈಕ್‌ನಡೆಸಿದ್ದಕ್ಕೆ ಸಾಕ್ಷ್ಯ ಕೇಳಿದ್ದವರು ಕೊಲೆ ಪ್ರಕರಣಕ್ಕೆ ಸಾಕ್ಷ್ಯ ಕೇಳುವುದರಲ್ಲಿ ಅತಿಶಯವಿಲ್ಲ. ರಾಜೀನಾಮೆ ನೀಡಿ, ತನಿಖೆಗೆ ಎದುರಿಸಿದರೆ ಸಾಕ್ಷ್ಯ ಮುನ್ನಲೆಗೆ ಬರುತ್ತದೆ, ಅದು ಬಿಟ್ಟು ಮಂತ್ರಿ ಪದವಿಯಲ್ಲಿದ್ದುಕೊಂಡು ತನಿಖೆ ನಡೆಸಿ ಎನ್ನುವುದು ಬರೇ ಬೂಟಾಟಿಕೆ ಅಷ್ಟೇ.
ಸಚಿವರ ಆಪ್ತರೊಬ್ಬರು ಬಡಪಾಯಿ ಸಚಿವರ ಆಣತಿ, ನಿರ್ದೇಶನ, ಅಭಯಹಸ್ತ ಇಲ್ಲದೆ ಗುತ್ತಿಗೆದಾರನಿಂದ ಕೋಟಿ ಮೊತ್ತದಲ್ಲಿ ಕಿಕ್‌ಬ್ಯಾಕ್‌ಪಡೆಯಲು ಸಾಧ್ಯವೇ? ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.