ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೇಣು ಬಿಗಿದುಕೊಂಡರೂ ಸರಿ, ಸೀಮೆ ಎಣ್ಣೆ ಸುರಿದುಕೊಂಡು ಜೀವಸಹಿತ ಸುಟ್ಟುಕೊಂಡರೂ ಸರಿ, ವಿಷ ಕುಡಿದು ಸತ್ತರೂ ಸರಿ 60% ಕಮಿಷನ್ ಕೊಡುವವರೆಗೂ ಕಂಟ್ರಾಕ್ಟರ್ ಗಳ ಬಿಲ್ ಪಾವತಿ ಮಾಡುವುದಿಲ್ಲ ಎನ್ನುವಷ್ಟು ಕೀಳು ಮಟ್ಟಕ್ಕೆ ಇಳಿದಿದೆ ಈ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಲಜ್ಜೆಗೆಟ್ಟ ಕಮಿಷನ್ ದಾಹ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ತಮ್ಮ ಸರ್ಕಾರದ ಕಿರುಕುಳಕ್ಕೆ ಇನ್ನೆಷ್ಟು ಕಂಟ್ರಾಕ್ಟರ್ ಗಳು ಬಲಿಯಾಗಬೇಕು? ಇನ್ನೆಷ್ಟು ಅಮಾಯಕ ಕುಟುಂಬಗಳು ಬೀದಿಗೆ ಬರಬೇಕು?
ನಮ್ಮ ಬಾಕಿ ಬಿಲ್ ಪಾವತಿ ಮಾಡಿ, ಇಲ್ಲವೇ ದಯಾಮರಣ ಕೊಡಿಸಿ ಎನ್ನುವ ಮಟ್ಟಕ್ಕೆ ಕಂಟ್ರಾಕ್ಟರ್ ಗಳು ಇಳಿದಿದ್ದಾರಲ್ಲ, ಅಂತಹವರಿಗೆ ದಯಾಮರಣ ಕೊಡಬೇಕೋ ಬೇಡವೋ ಎನ್ನುವುದೇ ಡಿನ್ನರ್ ಮೀಟಿಂಗ್ ನಲ್ಲಿ ಚರ್ಚೆಯಾದ ವಿಷಯಾನಾ? ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.