ಶಂಕರ್ ಚಿತ್ರಮಂದಿರದ ಕುಮಾರ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ೨೦೨೪-೨೫ ನೇ ಸಾಲಿಗೆ ಬೆಂಗಳೂರಿನ ಕರ್ನಾಟಕ ಫಿಲಂ ಚೇಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಚಿತ್ರದುರ್ಗದ ಶಂಕರ್ ಚಿತ್ರಮಂದಿರದ ಮಾಲೀಕರಾದ ಜಿ.ಪಿ.ಕುಮಾರ್ ಪ್ರದರ್ಶಕರ ವಲಯದಿಂದ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿದ್ದಾರೆ.

ಪ್ರದರ್ಶಕರ ವಲಯದಿಂದ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿರುವ ಜಿ.ಪಿ.ಕುಮಾರ್ ಅವರಿಗೆ ಹಿತೈಷಿಗಳು, ಸ್ನೇಹಿತರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Share This Article
error: Content is protected !!
";