ಮೇ.17 ಮತ್ತು 18 ರವರೆಗೆ ಶಾಂತಿಸಾಗರ ನೀರು ಸರಬರಾಜು ಸ್ಥಗಿತ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರು ಸರಬರಾಜು ಆಗುವ ಶಾಂತಿಸಾಗರ ನೀರು ಸರಬರಾಜು ಯೋಜನೆಯ ಕೊಟ್ಟಿಗೆಹಳ್ಳಿ ಮದ್ಯಂತರ ಜಲಗಾರದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ವಿದ್ಯುತ್ ಉಪಕರಣಗಳ ಪುನಃಶ್ಚೇತನ ಕಾಮಗಾರಿಯನ್ನು ಕೈಗೊಳ್ಳಲು

ಹಾಗೂ ನಗರಸಭೆ ವತಿಯಿಂದ ಮುಖ್ಯ ಕೊಳವೆ  ಮಾರ್ಗದಲ್ಲಿ ದುರಸ್ಥಿ ಕೆಲಸವನ್ನು ಕೈಗೊಳ್ಳಬೇಕಾಗಿರುವುದರಿಂದ ಶಾಂತಿಸಾಗರ  ನೀರು ಸರಬರಾಜು ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಇದೇ ಮೇ.17 ರಿಂದ 18 ರವರೆಗೆ ಸ್ಥಗಿತಗೊಳ್ಳಲಿದೆ.

ಸಾರ್ವಜನಿಕರು ತಮ್ಮ ತಮ್ಮ ಪ್ರದೇಶದಲ್ಲಿನ ಕೊಳವೆ ಬಾವಿಗಳ  ನೀರನ್ನು ಮತ್ತು ಶುದ್ಧ ಕುಡಿಯುವ ನೀರನ್ನು ಉಪಯೋಗಿಸಲು ಕೋರಿದೆ ಹಾಗೂ ನೀರನ್ನು ಮಿತವಾಗಿ ಬಳಸಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಕೋರಿದ್ದಾರೆ.

 

Share This Article
error: Content is protected !!
";