ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಾಣಿವಿಲಾಸ ಜಲ ಸಾಗರ ಕೋಡಿ ಬಿದ್ದಿದ್ದು ಪ್ರಥಮ ಗಂಗಾ ಪೂಜೆ ಮಾಡಲಾಯಿತು. ಶೇಂಗಾ ನಾಡು ತಿಮ್ಮರಾಜ್ ಗೌಡ್ರು ವಿವಿ ಸಾಗರಕ್ಕೆ ಆಗಮಿಸಿ ಬಾಗಿನ ಅರ್ಪಿಸಿದರು.
ಪ್ರತಿ ವರ್ಷ ಡ್ಯಾಂ ಭರ್ತಿಯಾಗಿ ಕುಡಿಯುವ ನೀರು, ರೈತರ ಹೊಲ ಗದ್ದೆಗಳಿಗೆ ಸಮೃದ್ಧಿ ನೀರು ಪೂರೈಕೆಯಾಗಲಿದೆ ಎಂದು ಕಣಿವೆ ಮಾರಮ್ಮ ದೇವಿಯನ್ನು ಪ್ರಾರ್ಥಿಸಿದರು.
ರೈತ ಮುಖಂಡರಾದ ಹೊರಕೇರಪ್ಪ, ಚೇತನ್, ವೈ.ಜಿ.ನಾಗರಾಜ್ ಸೇರಿದಂತೆ ಹಲವು ರೈತ ಮುಖಂಡರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಮುತ್ತೈದರಿಗೆ ಅರಿಶಿನ ಕುಂಕುಮ ಬಳೆಯನ್ನು ಮುತ್ತೈದೆ ಭಾಗ್ಯದ ರೂಪಕವಾಗಿ ತಿಮ್ಮರಾಜ್ ಗೌಡರಿಂದ ಕೊಡಲಾಯಿತು.