ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಇಲ್ಲಿನ ನಗರಸಭೆಯ ನಾಲ್ಕನೇ ವಾರ್ಡ್‌ನ ಸದಸ್ಯರ ಆಯ್ಕೆಗಾಗಿ ಚುನಾವಣೆ ಘೋಷಣೆಯಾಗಿದ್ದು, ಒಟ್ಟು ಮೂವರು ಅಭ್ಯರ್ಥಿಗಳು ನಾಲ್ಕು ನಾಮಪತ್ರಗಳನ್ನು ಸಲ್ಲಿಸಿದ್ದು, ಎಲ್ಲವೂ ಕ್ರಮಬದ್ದವಾಗಿವೆ ಎಂದು ಚುನಾವಣಾಧಿಕಾರಿ ಡಾ.ರೇವಣ್ಣ ತಿಳಿಸಿದರು.
ನಾಮಪತ್ರ ವಾಪಾಸ್ ಪಡೆಯಲು ನ.15 ಕಡೆಯ ದಿನವಾಗಿದೆ. ನ.೧೪ರಂದೇ ಉಳಿದ ಇಬ್ಬರು ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ವಾಪಾಸ್ ಪಡೆದಿರುತ್ತಾರೆ.
ಅರುಣ ಜಗದೀಶ್ ಮತ್ತು ಮಂಜುನಾಥ ಎಂಬುವವರು ನಾಮಪತ್ರ ವಾಪಾಸ್ ಪಡೆದಿದ್ದು, ಕಣದಲ್ಲಿ ಏಕೈಕ ಅಭ್ಯರ್ಥಿ ಶಿಲ್ಪಮುರುಳಿ ಉಳಿದಿದ್ದು ನ.26ರಂದು ನಾಲ್ಕನೇ ವಾರ್ಡ್‌ನಿಂದ ನೂತನ ಸದಸ್ಯರಾಗಿ ಶಿಲ್ಪಮುರುಳಿ ಅವಿರೋಧವಾಗಿ ಆಯ್ಕಯಾಗಿದ್ದಾರೆಂಬು ಘೋಷಣೆ ಬಾಕಿ ಇದೆ.
ಕಳೆದ ೨೦೧೮ರ ನಗರಸಭೆ ಚುನಾವಣೆಯಲ್ಲಿ ೧೯ನೇ ವಾರ್ಡ್‌ನ ಅಭ್ಯರ್ಥಿಯಾಗಿದ್ದ ಕವಿತಾ ವೀರೇಶ್ ಸಹ ಅವಿರೋಧವಾಗಿ ಆಯ್ಕೆಯಾಗಿದ್ದನ್ನು ಸ್ಮರಿಸಬಹುದಾಗಿದೆ.