ಭಾರತ ಪ್ರವೇಶಕ್ಕೆ ಸಜ್ಜಾದ ಶಿಂಕೋ ನೇಮ್’ಪ್ಲೇಟ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ 100 ಕೋಟಿ ಹೂಡಿಕೆಯೊಂದಿಗೆ ಭಾರತ ಪ್ರವೇಶಕ್ಕೆ ಶಿಂಕೋ ನೇಮ್ಪ್ಲೇಟ್ ಸಜ್ಜಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಮಾಹಿತಿ ನೀಡಿದರು.

ಎಂಬ್ಲಂಗಳು, ಕೀ ಫಾಬ್‌ಗಳು ಹಾಗೂ ಒಳಾಂಗಣ ಭಾಗಗಳಂತಹ ಆಕರ್ಷಕ ಆಟೋಮೋಟಿವ್ ಅಲಂಕಾರಿಕ ಉತ್ಪನ್ನಗಳ ಪ್ರಮುಖ ತಯಾರಕ ಸಂಸ್ಥೆಯಾಗಿರುವ ಜಪಾನ್ ನ ಶಿಂಕೋ ನೇಮ್ಪ್ಲೇಟ್  ಕಂಪೆನಿ (Shinko Nameplate Co.)ಯ ಪ್ರಮುಖರನ್ನು  ಕೈಗಾರಿಕಾ ಇಲಾಖೆಯ ನಿಯೋಗದ ಸದಸ್ಯರು ಭೇಟಿಯಾಗಿ ಫಲಪ್ರದ ಮಾತುಕತೆ ನಡೆಸಿದರು.

- Advertisement - 

ಸಂಸ್ಥೆಯು ಭಾರತದ ಮೊದಲ ಘಟಕವನ್ನು ಬೆಂಗಳೂರಿನ ಸಮೀಪ 2.3 ಎಕರೆ ಪ್ರದೇಶದಲ್ಲಿ, 100 ಕೋಟಿ ಹೂಡಿಕೆ ಮೂಲಕ ಸ್ಥಾಪಿಸಲು ನಿರ್ಧರಿಸಿದೆ.

ಹೊಸ ಘಟಕವು ಪ್ರೀಮಿಯಂ ಅಲಂಕಾರಿಕ ಪ್ಲಾಸ್ಟಿಕ್ ಘಟಕಗಳನ್ನು ಆಟೋಮೊಬೈಲ್ ಕ್ಷೇತ್ರಕ್ಕೆ ಪೂರೈಸಲಿದ್ದು, ಭಾರತದಲ್ಲಿ ನಂಬರ್ 1 ಆಟೋ ಮತ್ತು ಇವಿ ಹಬ್ ಆಗಿರುವ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ.

- Advertisement - 

ಸರ್ಕಾರದ ಸಂಪೂರ್ಣ ಸಹಕಾರದ ಭರವಸೆ ನೀಡಿದ್ದು, ಶೀಘ್ರದಲ್ಲೇ ಕಾರ್ಯಾರಂಭ ಮಾಡುವಂತೆ ಉತ್ತೇಜಿಸಲಾಯಿತು ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

Share This Article
error: Content is protected !!
";