ಶಿವ ಸಿಂಚನ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಶಿವ ಸಿಂಚನ
ಬಗೆದಷ್ಟು

ಕೌತುಕದ ಆವಿಷ್ಕಾರ
ಜಲ ಸಂಗಮದ
ಜಲಧಾರ
ಪುಳಕಿತಗೊಂಡವರ
ಜೀವನದ ಪ್ರವರ

ತ್ರಿವೇಣಿ ಸಂಗಮದ
ತಿರುಳರಿತ ನಾಗಾಘೋರಿಗಳ
ಸಂಗಮ
ಸಾಧು ಸಂತರ
ಸಮಾಗಮ
ಭಕ್ತ ಸಾಗರದ
ಸರಿಗಮ

- Advertisement - 

ನಲಿದರು
ನರ್ತಿಸಿ ಮೆರೆದರು
ಕಳಚಿ ಕರ್ಮವ
ಧರಿಸಿದರು ಧರ್ಮದ
ಧೋತರವ
ಅಭಿವಂದಿಸಿದರು
ಗಂಗೆ ಯಮುನೆ ಸರಸ್ವತಿಯರಿಗೆ

ಕೊಂಡೊಯ್ದರು
ಮನುಕುಲದ
ಮನದ , ನೆಲದ
ಕಪ್ಪುಗಳನು
ಹರಿಸಿದರು
ಆದರ್ಶ ಜೀವನದ
ಆವಿಷ್ಕಾರವನು

- Advertisement - 

ಕೋಟಿ ಕೋಟಿ
ಭಕುತರ ಬವಣೆ
ನೀಗಿಸಿ ಧನ್ಯಳಾಗಿಸಿದಳು
ಗಂಗೆ
ಮುಕ್ತವಾಗಿಸಿದಳು
ಮೃತುವಿನಿಂದ
ತಿಳಿ ನೀಲ
ಯಮುನೆ
ಸ್ಥಿತ ಪ್ರಜ್ಞಳಾ ಗಿಸಿದಳು
ಗುಪ್ತಗಾಮಿನಿ
ಸರಸ್ವತಿ

ಅದೇಕೆ ಈ ಕುಂಭ ಸ್ನಾನ
ನೀಗಿಸುವಳೇ ಜಗದ
ಜನರ ಹಸಿವ
ಲಕುಮಿಯ ಬವಣೆಯ
ಎನುವ ಅಧಮರ
ಅನುಭೂತಿಸಿದಳು
ತ್ರಿವೇಣಿ

ಸಂಗಮದಲಿ
ಸಮಗಮರಾದರು
ಮೋಕ್ಷ ಪಡೆದು
ಪುನೀತರಾದರು
ಪುನರ್ಜನ್ಮದ ಪಥಕೆ
ಸಾಗಿದ ಪುಣ್ಯಾತ್ಮರು
ನಮಿಸುವುದು
ಭರತ ಭೂಮಿ
ಅನವರತ

ತ್ರಿವೇಣಿಯಲಿ
ಮಿಂದದವರು
ಮಿಂದವರ ದರುಶನವ
ಪಡೆದು ಪಾವನರಾಗಿರಿ
ಪಡೆಯಿರಿ ಹಿರಿಯರ
ಆಶೀರ್ವಾದ
ಸ್ಪರ್ಶಿಸಿ ಪಾದವ

ಇಹುದು ಶಿವರಾತ್ರಿ
ಶಿವನ ಜಟೆಯಲಿ
ದುಮ್ಮಿಕ್ಕುವುದು ಗಂಗೆ ಮನದ ಧರೆಗೆ
ಭಜಿಸಿ ಭುಜಿಸಿ
ಅಹೋರಾತ್ರಿ ಜಪಿಸಿ
ಶಿವ ಸಂಗಮದಲಿ
ಮೇಳೈಸಿ
ಮನವರಳಿಸಿ
ಮನದ ವಿಕೃತಿಯ ಮರೆತು
ಪಡೆಯಿರಿ
ಶಿವ ಸಿಂಚನ
ಕವಿತೆ-ಗುಜ್ಜರ್,ದಾವಣಗೆರೆ

Share This Article
error: Content is protected !!
";