ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ನಿರೀಕ್ಷೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಭವಿಷ್ಯ ನುಡಿದರು.
ಅವರು ಮೈಸೂರಿನಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿ ವಿಶ್ವನಾಥ್ ಮಾಧ್ಯಮಗಳೊಂದಿಗೆ ಮಾತನಾಡಿ, ಹೈಕಮಾಂಡ್ ಸೂಚನೆ ಆ ರೀತಿ ಇದೆ. ರಾಜ್ಯದಲ್ಲಿ 136 ಸ್ಥಾನ ಬರಲು ಡಿ.ಕೆ.ಶಿವಕುಮಾರ್ ಪಾತ್ರ ಇದೆ.
ಆದ್ದರಿಂದ ಹೈಕಮಾಂಡ್ ಡಿ.ಕೆ.ಶಿವಕುಮಾರ್ಗೆ ಅವಕಾಶ ಕೊಡುತ್ತಾರೆ ಎಂಬ ನಿರೀಕ್ಷೆ ಇದೆ ಎಂದರಲ್ಲದೆ ಅವರು, ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ, ಶಾಸಕರಲ್ಲ ಎಂದು ತಿಳಿಸಿದರು.
ವರ್ಗಾವಣೆಗೆ ಪೊಲೀಸರು ಹಣ ಕೊಡಬೇಕು. ಒಂದು ಎಸಿಪಿ ವರ್ಗಾವಣೆಗೆ ಒಂದು ಕೋಟಿ ಕೊಡಬೇಕು, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಧೂಳೀಪಟವಾಗಿದೆ ಎಂದು ವಿಪ ಸದಸ್ಯ ವಿಶ್ವನಾಥ್ ಆರೋಪಿಸಿದರು.

