ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕಿನ ಕಂದಿಕೆರೆ ಗ್ರಾಮದ ಶ್ರೀ ಶಿವಧೂತಸ್ವಾಮೀಜಿ ಆಶ್ರಮದಲ್ಲಿ 44 ನೇ ವರ್ಷದ ಪುಣ್ಯಾ ಶಿವಗಣಾರಾಧನೆ ಶ್ರೀ ಸುಖಮುನಿ ಸ್ವಾಮಿಜಿಯವರ ಗದ್ದುಗೆಯ ನೂತನ ಕಟ್ಟಡ ಉದ್ಘಾಟನೆಯನ್ನು ಕಬೀರನಾಂದ ಮಠದ ಶ್ರೀ ಶಿವಲಿಂಗನಂದಸ್ವಾಮೀಜಿ ನೇರವೇರಿಸಿದರು.
ಸಮಾಜ ಸೇವಕ ಕೆ.ಜಗದೀಶ್ ಕಂದಿಕೆರೆ ಮಾತನಾಡಿ ಶ್ರೀ ಶಿವಧೂತಸ್ವಾಮಿಜಿ ರವರು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಜನಿಸಿ ಸದ್ಗುರು ಅಡವಿಸಿದ್ದರಿಗೆ ಶಿಷ್ಯರಾಗಿ ಅರಿವಿನಿಂದ ಅತ್ಮಶೋಧನೆ ಮಾಡಿ ದಾವಣಗೆರೆ ಬಳಿ ಇರುವ ಕೈದಿಹಳ್ಳಿಗೆ ಬಂದು ಪುಣ್ಯ ಪುರುಷರೆನಿಸಿಕೊಂಡರು.
ಅಲ್ಲಿಂದ ಚಿತ್ರದುರ್ಗ ಬಳಿ ಮದಕರಿಪುರದಲ್ಲಿ ಶ್ರೀ ಮಾರುತಿಗುಡಿಯಲ್ಲಿ ಯೋಗ ಮಗ್ನರಾಗಿದ್ದಾಗ ಊರಿನ ಜನರೆಲ್ಲ ರೋಗ ರುಜಿನಗಳಿಂದ ತತ್ತರಿಸುತ್ತಾ ದಿವ್ಯ ಯೋಗಿಗಳ ಪಾದದೆಡೆಗೆ ಬಂದು ನಮಸ್ಕರಿಸಿ ಕಾಪಡುವಂತೆ ಕೋರಿಕೊಂಡಾಗ ವಿಭೂತಿ ಭಸ್ಮವನ್ನು ಕೊಟ್ಟಾಗ ಕಷ್ಟವೆಲ್ಲ ಪರಿಹಾರವಾಯಿತು. ಆಗ ಭಕ್ತರಲ್ಲರೂ ಸೇರಿ ಮಠ ವೂಂದನ್ನ ಕಟ್ಟಿ ಗುರುಗಳನ್ನು ಕರೆದೊಯ್ದರು.
ಹೀಗೆ ಸ್ವಾಮೀಜಿಯವರ ಪ್ರಭಾವ ದಿನೇದಿನೆ ಹೆಚ್ಚುತ್ತಿದ್ದು ಹಿರಿಯೂರು ತಾಲ್ಲೂಕಿನ ಕಂದಿಕೆರೆ ಗ್ರಾಮದಲ್ಲಿ ಬೀಕರ ಬರಗಾಲದಲ್ಲಿ ಮಳೆ ತರಿಸಿದ ಪವಾಡ ಜನರನ್ನು ವಿಸ್ಮಯಗೊಳಿಸಿತು. ಕಂದಿಕೆರೆಯಲ್ಲಿಯೆ ಸ್ವಾಮೀಜಿಗಳು ಜೀವೈಕ್ಯವಾಗಿದ್ದು ಅಂದಿನಿಂದ ಇಂದಿನವರೆಗೂ ಕಂದಿಕೆರೆ ಗ್ರಾಮದಲ್ಲಿ ಮಠ ನಿರ್ಮಾಣ ಮಾಡಿ ಬೆಳಗಾವಿ ಹುಬ್ಬಳ್ಳಿ ಹಾವೇರಿ ಗದಗ ದಾವಣಗೆರೆ ಚಿತ್ರದುರ್ಗದ ಜಿಲ್ಲೆಗಳಿಂದ ಶಿಷ್ಯ ಮತ್ತು ಭಕ್ತಿ ವೃಂದ ಆಗಮಿಸಿ ಆಶೀರ್ವಾದ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.
ಗ್ರಾಮದ ಮುಖಂಡರಾದ ಎಂ.ಟಿ.ತಿಪ್ಪೇಸ್ವಾಮಿ, ಶ್ರೀ ಕಂಠಪ್ಪ, ಈ.ಸಿದ್ದಯ್ಯ, ಕೆ.ಬಸವರಾಜು, ಕಂಬಣ್ಣ, ಹೊರಕೇರಪ್ಪ ಸೇರಿದಂತೆ ಹಲವು ಭಕ್ತರು, ಗ್ರಾಮಸ್ಥರು ಹಾಜರಿದ್ದರು.