ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರೇಣುಕಸ್ವಾಮಿ ಕೊಲೆ ಆರೋಪಿ ದರ್ಶನ್ ಕಡೆಯಿಂದ ಹಣ ಪಡೆದ ವದಂತಿಗೆ ತಂದೆ ಶಿವನಗೌಡ್ರು ಕಣ್ಣೀರಿಟ್ಟ ಪ್ರಸಂಗ ಜರುಗಿತು.
ಚಿತ್ರದುರ್ಗ ನಗರದ VRS ಬಡಾವಣೆಯ ನಿವಾಸದಲ್ಲಿ ನಟ ದರ್ಶನ್ ನಿಂದ ಹತ್ಯೆಯಾದ ರೇಣುಕಸ್ವಾಮಿ ಕುಟುಂಬಸ್ಥರು ಗುರುವಾದ ಸುದ್ದಿಗೋಷ್ಠಿ ಮಾಡಿ ಕಣ್ಣೀರಿಟ್ಟು ಮಾತನಾಡಿದರು.
ಹಲವು ದಿನಗಳಿಂದ ಫೇಸ್ಬುಕ್ನಲ್ಲಿ ಕೆಲವು ವಿಚಾರಗಳು ಬರುತ್ತಿವೆ. ನಾವು ದರ್ಶನ್ ಬಳಿ ಹೋಗಿದ್ದೇವೆ, ಅವ್ರುನಮ್ಮತ್ರ ಬಂದಿದ್ದಾರೆ, ನಾವು ಅದ್ಯಾವುದೋ ಶೆಡ್ ಗೆ ಹೋಗಿದ್ವಿ, ಅವ್ರೇನೋ ಹಣ ಕೊಟ್ಟಿದ್ದಾರೆ, ನಾವೇನೋ ಇಸ್ಕಂಡ್ವಿ ಎಂದು ಬರುತ್ತಿವೆ. ನಾವು ಅದರ ಬಗ್ಗೆ ಲಕ್ಷ್ಯ ಕೊಡುತ್ತಿಲ್ಲ, ಬಿಟ್ಟುಬಿಟ್ಟಿದ್ದೇವೆ.
ನಮಗೆ ಬಹಳಷ್ಟು ಜನ ಫೋನ್ ಮಾಡಿ ಕೇಳುತ್ತಿದ್ದಾರೆ. ನಾವು ಯಾರೂ ಅವ್ರನ್ನ ಭೇಟಿ ಮಾಡಿಲ್ಲ, ಅವ್ರು ಯಾರೂ ನಮ್ಮನ್ನ ಭೇಟಿ ಮಾಡಲು ಬಂದಿಲ್ಲ. ನಾವು ಯಾರತ್ರನೂ ಹತ್ತು ಪೈಸೆ ಹಣ ಇಸ್ಕೊಂಡಿಲ್ಲ ಎಂದು ಶಿವನಗೌಡ್ರು ಹೇಳಿದರು. ಸಾಮಾಜಿಕ ಜಾಲತಾಣದಲ್ಲಿ ಅದೇನೋ ಕಾರು ಬುಕ್‌ಮಾಡಿದ್ದೇವೆ ಎಂದು ಪೋಸ್ಟರ್ ಹಾಕಿದ್ದಾರೆ. ನಮ್ಮ ಬಳಿ ಹಳೇ ಸ್ಕೂಟರ್ ರಿಪೇರಿ ಮಾಡಿಸಲು ಆಗಿಲ್ಲ. ಹೀಗೆ ಅದನ್ನ ಫೇಸ್ಬುಕ್ನಲ್ಲಿ ಹಾಕಿ ಅದು ನಿಜ ಎಂಬಂತೆ ಆಗಿದೆ. ಫೇಸ್ಬುಕ್ ಫೇಕ್ಬುಕ್ ಅವಾಂತರ ಸೃಷ್ಠಿಯಿಂದ ನೋವು ತಂದಿದೆ ಎಂದು ಅವರು ಕಣ್ಣೀರಿಟ್ಟರು.
ಕರ್ನಾಟಕದ ಜನತೆಗೆ ನಾವು ಈಮೂಲಕ ಸ್ಪಷ್ಟನೆ ನೀಡುತ್ತಿದ್ದೇವೆ. ಸರ್ಕಾರ ಸುಪ್ರೀಂ ಕೋರ್ಟ್ ಗೆ ಆಪೀಲ್ ಹಾಕಿದ್ದನ್ನ ನಾವು ಸ್ವಾಗತಿಸುತ್ತೇವೆ. ಸರ್ಕಾರಕ್ಕೆ ನಾವು ಧನ್ಯವಾದಗಳನ್ನ ತಿಳಿಸುತ್ತೇವೆ ಎಂದು ಶಿವನಗೌಡ್ರು ತಿಳಿಸಿದರು.
ನಾವು ನಮ್ಮ ಸೊಸೆಗೆ ಒಂದು ಸರ್ಕಾರಿ ನೌಕರಿ ಕೊಡಿ ಎಂದು ಕೇಳಿದ್ದೆವು. ಆದರೆ ಸರ್ಕಾರ ಅದನ್ನ ಕೊಡಲು ಆಗಲ್ಲ ಎಂದು ಹಿಂಬರಹ ಕೊಟ್ಟಿದೆ. ಸರ್ಕಾರ ನೀಡಿದ ಹಿಂಬರಹದಿಂದ ನಮಗೆ ದೊಡ್ಡ ಆಘಾತವಾಗಿದೆ.ಮುಂದೆ ನನ್ನ ಸೊಸೆ, ಮೊಮ್ಮಗ ಎಲ್ಲಿ ಬೀದಿ ಪಾಲಾಗುತ್ತಾರೋ ಎಂಬ ಆತಂಕ ಮನೆ ಮಾಡಿದೆ ಎಂದು ಅವರು ತಿಳಿಸಿದರು.
ರೇಣುಕಸ್ವಾಮಿ ಸಂಬಂಧಿ ಷಡಕ್ಷರಿ ಮಾತನಾಡಿ ಶಿವನಗೌಡರ ಕುಟುಂಬಸ್ಥರು ನೊಂದಿದ್ದಾರೆ, ಅವರ ಜೀವಕ್ಕೆ ನೋವು ಕೊಡಬೇಡಿ. ಅಭಿಮಾನಿಗಳು, ಯಾರೇ ಇರಲಿ ನಿಮ್ಮ ಆಭಿಮಾನ ನೀವು ಇಟ್ಟುಕೊಳ್ಳಿ ಎಂದು ತಾಕೀತು ಮಾಡಿದರು. ಸುಪ್ರೀಂ ಕೋರ್ಟ್ ವಕೀಲರನ್ನ ನೇಮಿಸಿದ್ದ ನಮಗೆ ಸಂತಸ ತಂದಿದೆ. ಈಗ ಕೇಸಿನ ವಿಚಾರಣೆ ಫಾಸ್ಟ್ ಟ್ರಾಕ್ ಮೂಲಕ ನಡೆಯಲಿ ಎಂದು ಕೇಳಿಕೊಳ್ಳುವೆ.
ಈ ಘಟನೆಯನ್ನ ಜನರು ಮರೆಯುವ ಮುನ್ನ ವಿಚಾರಣೆ ಆಗಲಿ. ಸ್ವಾಮಿ ಪತ್ನಿಗೆ ನೌಕರಿ ಕೊಡಲು ನಾವು ಮರು ಪರಿಶೀಲನೆಗೆ ಅರ್ಜಿ ಸಲ್ಲಿಸುತ್ತೇವೆ.
ಹಣದ ವಿಚಾರಕ್ಕೆ ರೇಣುಕಾಸ್ವಾಮಿ, ಪತ್ನಿ ಸಹನಾ ಕಟುಂಬದ ನಡುವೆ ಒಡಕು ಎಂಬ ವದಂತಿ. ನಮ್ಮ ಕುಟುಂಬಗಳ ನೆಡುವೆ ಯಾವುದೇ ಬಿನ್ನಾಭಿಪ್ರಾಯ, ಒಡಕಿಲ್ಲ. 2 ಕುಟುಂಬಗಳುಚೆನ್ನಾಗಿಯೇ ಇದ್ದೇವೆ ಎಲ್ಲಾ ವದಂತಿ ಸುಳ್ಳು ಎಂದು ಅವರು ತಿಳಿಸಿದರು.
ರೇಣುಕಾಸ್ವಾಮಿ ತಾಯಿ ಪತ್ರಿಕಾಗೋಷ್ಠಿಯಲ್ಲಿದ್ದರು.