ನಮ್ಮ ಮೇಲೆ ಬಲಪ್ರಯೋಗ ಮಾಡಿದವನ್ನು ಹೇಡಿಯಂತೆ ಸಹಿಸಬಾರದು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪೆಹಲ್ಗಾಮ್ ನಲ್ಲಿ ನಡೆದ ಉಗ್ರರ ಪೈಶಾಚಿಕ ಅಟ್ಟಹಾಸದ ವಿರುದ್ಧದ ಪ್ರತಿಕಾರವಾಗಿ ಆಪರೇಷನ್ ಸಿಂಧೂರದ ಮೂಲಕ ಕೊಟ್ಟ ತಿರುಗೇಟಿಗೆ ಶತಕೋಟಿ ಭಾರತೀಯರು ಹೆಮ್ಮೆ ಪಡುತ್ತಿದ್ದಾರೆ.

ಯೋಧರ ಸಾಹಸ ಹಾಗೂ ಪರಾಕ್ರಮವನ್ನು ಬೆಂಬಲಿಸಿ ಒಗ್ಗಟ್ಟಿನಿಂದ ದೇಶಾದ್ಯಂತ ವಂದೇ ಮಾತರಂ ಜಯಘೋಷ ಮೊಳಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ವಿಶ್ವವೇ ಕುತೂಹಲ ಹಾಗೂ ಆತಂಕದಿಂದ ನೋಡುತ್ತಿದ್ದ ಈ ಕಾರ್ಯಾಚರಣೆಯಲ್ಲಿ ಇದು ಯುದ್ಧವಲ್ಲ, ಕೇವಲ ಪ್ರತಿಕ್ರಿಯೆ ಎನ್ನುತ್ತಲೇ ಭಾರತದ ಭೂ ಸೇನೆ, ವಾಯುಸೇನೆ ಹಾಗೂ ನೌಕಾಪಡೆಯ ಯೋಧರು ಸಮನ್ವಯದಿಂದ ಹೋರಾಡಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಕ್ಷಣೆ, ಗೃಹ ಹಾಗೂ

ವಿದೇಶ ವ್ಯವಹಾರ ಇಲಾಖೆಗಳು ಕೈ ಜೋಡಿಸಿ ರಾಜತಾಂತ್ರಿಕವಾಗಿಯೂ ಸಿಂಧೂರವನ್ನು ಸೈ ಎನಿಸಿ ಭಾರತದ ದಕ್ಷ ಹಾಗೂ ಸಮರ್ಥ ಆಡಳಿತ ಯಂತ್ರದ ಕಾರ್ಯಕ್ಷಮತೆಯ ಸೊಬಗು ಪಸರಿಸಿದ ಕುರಿತು ಅಂದು ಮಹಾತ್ಮ ಗಾಂಧೀಜಿ ಅವರು ಹೇಳಿದ್ದ ನಮ್ಮ ಮೇಲೆ ಬಲಪ್ರಯೋಗ ಮಾಡುವ ಜನರನ್ನು ಹೇಡಿಯಂತೆ ಸಹಿಸಬಾರದುಎಂಬ ಮಾತು ನೆನಪಿಸಿ ಪತ್ರದ ಸಮರ್ಪಣೆಯ ಮೂಲಕ ಚೀ.ಜ.ರಾಜೀವ ಅವರು ಬರೆದಿರುವ ವಿಶೇಷ ಲೇಖನ ಎಲ್ಲರೂ ಅವಲೋಕಿಸೋಣ ಎಂದು ವಿಜಯೇಂದ್ರ ಕರೆ ನೀಡಿದ್ದಾರೆ.

 

- Advertisement - 
Share This Article
error: Content is protected !!
";