ಶ್ರೀ ಘಾಟಿ ಸುಬ್ರಮಣ್ಯ ಸ್ವಾಮಿ ಬ್ರಹ್ಮ ರಥೋತ್ಸವ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲೂಕಿನ
, ತೂಬಗೆರೆ ಹೋಬಳಿ ಐತಿಹಾಸಿಕ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಶ್ರೀ ಕ್ರೋಧಿನಾಮ ಸಂವತ್ಸರದ ಪುಷ್ಯ ಶುದ್ಧ ಷಷ್ಠಿ ಜ.5 ರಂದು ಭಾನುವಾರ ಮಧ್ಯಾಹ್ನ 12-10 ರಿಂದ 12-20  ಗಂಟೆಗೆ ಸಲ್ಲುವ ಶುಭ (ಮೀನ) ಲಗ್ನದಲ್ಲಿ ಅಭಿಜಿನ್ ಮುಹೂರ್ತದಲ್ಲಿ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೇರವೇರಿತು. ಬ್ರಹ್ಮರಥೋತ್ಸವ  ಕಾರ್ಯಕ್ರಮಕ್ಕೆ ಆಹಾರ ನಾಗರಿಕ ಸರಬರಾಜು ಹಾಗು ಗ್ರಾಹಕರ ವ್ಯವಹಾರ ಸಚಿವ ಹಾಗು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ ಹೆಚ್.ಮುನಿಯಪ್ಪ ಚಾಲನೆ ನೀಡಿದರು.

 ಶ್ರೀ ಸ್ವಾಮಿಯ ಬ್ರಹ್ಮ ರಥೋತ್ಸವದ ದಿನದ ಅಂಗವಾಗಿ ದೇವರಿಗೆ ಮುಂಜಾನೆಯಿಂದ ವಿವಿದ ಹೂವುಗಳಿಂದ ಸಿಂಗರಿಸಿ ವಿವಿಧ ಹೋಮ ಹವನ ಪೂಜಾ ಕೈಂ ಕರ್ಯ ಗಳು ಅದ್ದೂರಿಯಾಗಿ ವಿಜೃಂಭಣೆಯಿಂದ  ನೆರವೇರಿಸಲಾಯಿತು.

ಐತಿಹಾಸಿಕ ಹಿನ್ನೆಲೆಯ  ಸುಬ್ರಹ್ಮಣ್ಯೇಶ್ವರ ರಥದ ಚಕ್ರಗಳಿಗೆ  ನಾಲ್ಕು ಯುಗದ ಪ್ರತೀತಿಯಂತೆ ಋಗ್ವೇದ ಯಜುರ್ವೇದ ಸಾಮವೇದ  ಅಥರ್ವಣ ವೇದದ ನಾಲ್ಕು ಯುಗದ ನೆನಪಿಸಿಕೊಂಡು ಬ್ರಹ್ಮ ವಿಷ್ಣು  ಮಹೇಶ್ವರರ  ಹೆಸರಿನಲ್ಲಿ ಪೂಜೆ ಸಲ್ಲಿಸಲಾಯಿತು. ರಥಕ್ಕೆ ಕಟ್ಟಿದ ಹಗ್ಗವನ್ನು ವಾಸುಕಿ ಎಂಬ ಸರ್ಪವನ್ನು ಆರಾಧನೆ ಮಾಡಿ   ರಥದ ಮೇಲೆ  ಪ್ರದಾನ ಅರ್ಚಕರು ಕಳಸ ಇಟ್ಟ ನಂತರ ಗರುಡ ಪಕ್ಷಿ ರಥಕ್ಕೆ ಮೂರು ಸುತ್ತು  ಪ್ರದಕ್ಷಿಣೆ ಹಾಕಿದ ನಂತರ ಶುಭ ಘಳಿಗೆ ಎಂದು ನಂಬಿ ಶುಭ ಲಗ್ನದ ಮುಹೂರ್ತಕ್ಕೆ ಸರಿಯಾಗಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಬ್ರಹ್ಮ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ದೇಶ ಮೂಲೆ ಮೂಲೆಗಳಿಂದ  ಸಹಸ್ರಾರು ಜನ ಭಕ್ತರು  ಆಗಮಿಸಿ ರಥಕ್ಕೆ  ಹಣ್ಣು ದವನ ಅರ್ಪಿಸಿ ಧನ್ಯತೆ ಮೆರೆದರು‌.

ಪೂರ್ವಿಕರ ಸಂಪ್ರದಾಯದಂತೆ ಭಕ್ತಾದಿಗಳು ಸುಬ್ರಹ್ಮಣ್ಯೇಶ್ವರ ಸ್ವಾಮಿಯ  ತುಳು ಷಷ್ಠೀಯ ದಿನದಂದು  ನಾಗರ ಪೂಜೆ ಮಾಡುವುದರಿಂದ ಕುಜ ದೋಷ ಸರ್ಪದೋಷ ಕಾಳ ಸರ್ಪದೋಷ ನಿವಾರಣೆ ಯಾಗಲಿದೆ ಎಂದು ಬೆಳಗ್ಗೆಯಿಂದ ಭಕ್ತರು ನಾಗರ ಪೂಜೆ ಸಲ್ಲಿಸಿದರು.

ಬ್ರಹ್ಮರಥೋತ್ಸವ ವೇಳೆ ಯಾವುದೇ ಅಪಘಾತ, ಅನಾಹುತ, ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಸೂಕ್ತ ಕ್ರಮವಾಗಿ  ದಾರಿಯಲ್ಲಿ ಎಂಟರಿಂದ ಹತ್ತು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಬಹಳಷ್ಟು ಕಟ್ಟು ನಿಟ್ಟಾಗಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಅದರಂತೆ ಭಕ್ತಾಧಿಗಳ ಸಂಚಾರಕ್ಕೆ ದೊಡ್ಡಬಳ್ಳಾಪುರ ಕೆ ಎಸ್ ಆರ್ ಟಿಸಿ ಘಟಕದ ವತಿಯಿಂದ ಸುಮಾರು 75 ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು.ಹಾಗು ಭಕ್ತಾಧಿಗಳಿಗೆ ಉಚಿತ ವಾಹನದ ವ್ಯವಸ್ಥೆ ಕಲ್ಪಿಸಲಾಗಿತು‌.

ಜನ ಸಂದಣಿಯಲ್ಲಿ ಜನರ ಚಲನವಲನ ಗಮನಹರಿಸಲು ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ದೇವಸ್ಥಾನ ಸುತ್ತಾ ಮುತ್ತ ಸಿ‌‌‌. ಸಿ.ಟಿ. ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

 ಬೆಂಗಳೂರು ಹಾಗು ಹಿಂದೂಪುರ ಹೆದ್ದಾರಿ  ಮಾಕಳಿ ಕಡೆಯಿಂದ ಬರುವ ವಾಹನಗಳಿಗೆ ದೇವಸ್ಥಾನ ಹಿಂಭಾಗ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.ದೊಡ್ಡಬಳ್ಳಾಪುರದಿಂದ  ಕಂಟನ ಕುಂಟೆ, ಹಾಡೋನಹಳ್ಳಿ ಮಾರ್ಗವಾಗಿ ಬರುವ ವಾಹನಗಳಿಗೆ ಲಘುಮೇನಹಳ್ಳಿ ಗೇಟ್ ಸಮೀಪ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.

ಜನ ಸಂದಣಿಯಲ್ಲಿ ತಲೆ ಸುತ್ತು, ಇತರೆ ತೊಂದರೆಗಳು ಉಂಟಾದರೆ ವೈದ್ಯಕೀಯ ಸೇವೆ ಕಲ್ಪಿಸಲು ದೇವಸ್ಥಾನ ಬಳಿ ವೈದ್ಯರ ತಂಡವನ್ನು ನಿಯೋಜಿಸಲಾಗಿತ್ತು. ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ ಮಾಡಲಾಗಿತ್ತು. ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ಅವಕಾಶ ಮಾಡಲಾಗಿತ್ತು.

ರಥೋತ್ಸವದಲ್ಲಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್, ಜಿಲ್ಲಾಧಿಕಾರಿ ಡಾ.ಶಿವಶಂಕರ.ಎನ್, ಜಿ.ಪಂ ಸಿ.ಇ.ಒ ಡಾ.ಕೆ.ಎನ್ ಅನುರಾಧ, ಎಸ್ಪಿ ಸಿ.ಕೆ. ಬಾಬಾ, ದೊಡ್ಡಬಳ್ಳಾಪುರ ತಹಶೀಲ್ದಾರ್ ವಿದ್ಯಾ ವಿಭಾ ರಾಥೋಡ್, ಇ.ಒ ಮುನಿರಾಜು, ಮುಜರಾಯಿ ಇಲಾಖೆ ತಹಸೀಲ್ದಾರ್, ಜಿಲ್ಲಾ‌ಹಾಗು ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳುಮುಖಂಡರು ಹಾಗು ಲಕ್ಷಾಂತರ ಭಕ್ತರ  ಭಾಗವಹಿಸಿದ್ದರು.

 

 

- Advertisement -  - Advertisement - 
Share This Article
error: Content is protected !!
";