ಶುದ್ದೀಕರಣದ ನಂತರ  ಸಾರ್ವಜನಿಕರ ದರ್ಶನಕ್ಕೆ ಸಜ್ಜಾದ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ಪ್ರಸಿದ್ಧ ಶ್ರೀ ಘಾಟಿ ಕ್ಷೇತ್ರದ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವನ್ನು ಶುದ್ದೀಕರಣದ ನಂತರ ತೆರೆಯಲಾಗಿದ್ದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಪ್ರತಿ ದಿನವೂ ರಾತ್ರಿ 8:30ಕ್ಕೆ ದೇವಾಲಯನ್ನು ಮುಚ್ಚಲಾಗುತ್ತಿತ್ತು ಆದರೆ ದೇವಾಲಯದ ಬಾಗಿಲನ್ನು ಗ್ರಹಣದ ಹಿನ್ನಲೆ ಮೊನ್ನೆ ಸಂಜೆ 4:30ಕ್ಕೆ ಮುಚ್ಚಲಾಗಿತ್ತು.

- Advertisement - 

ಗ್ರಹಣದ ನಂತರ ಎಂದಿನಂತೆ ಬೆಳಿಗ್ಗೆ ಘಾಟಿ ಸುಬ್ರಹ್ಮಣ್ಯ ದೇವಾಲಯವನ್ನು ಶುದ್ದೀಕರಣಗೊಳಿಸಿ ದೇವರಿಗೆ ಎಂದಿನಂತೆ ಪ್ರಾತಃ ಕಾಲದ ಪೂಜೆ ಸಲ್ಲಿಸಿ  ಬಳಿಕ ದೇವಾಲಯದ ಬಂದ ಭಕ್ತಾಧಿಗಳು ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಯಿತು.

- Advertisement - 

ಘಾಟಿ ಸುಬ್ರಹ್ಮಣ್ಯ ದೇವಾಲಯ ಶುದ್ದೀಕರಣ ಮಾಡಿ, ಬಾಗಿಲು ತೆರೆದು, ದೇವರಿಗೆ ಎಂದಿನಂತೆ ಪ್ರಾತಃ ಕಾಲದ ಪೂಜೆ ಆರಂಭಮಾಡಲಾಗಿದೆ.

 

 

 

Share This Article
error: Content is protected !!
";