ಶ್ರೀಮಾತೆಯವರದು ಭಾವಪ್ರಧಾನ ಪೂಜೆ:ಮಾತಾಜೀ ತ್ಯಾಗಮಯೀ 

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಶ್ರೀಮಾತೆ ಶಾರದಾದೇವಿಯವರು ಶ್ರೀರಾಮಕೃಷ್ಣರಿಗೆ ಮಾಡುತ್ತಿದ್ದ ಪೂಜೆಯು ಭಾವ ಪ್ರಧಾನವಾದ ಪೂಜೆಯಾಗಿತ್ತು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು.                   

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಶ್ರೀರಾಮಕೃಷ್ಣ-ಶ್ರೀಮಾತೆ ರೂಪವೆರಡು ಶಕ್ತಿಯೊಂದು” ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡುತ್ತ ಮಾತನಾಡುತ್ತಿದ್ದರು‌.

- Advertisement - 

ಸತ್ಸಂಗದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರು ಮತ್ತು ಯತೀಶ್ ಎಂ ಸಿದ್ದಾಪುರ ಅವರಿಂದ ವಿಶೇಷ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

ಶ್ರೀರಾಮಕೃಷ್ಣ ಪರಮಹಂಸರ ದೇಹತ್ಯಾಗದ ನಂತರವೂ ನಿರಂತರವಾಗಿ ಅವರೊಂದಿಗೆ ಆತ್ಮೀಯತೆ ಇಟ್ಟುಕೊಂಡಿದ್ದ ಶಾರದಾಮಾತೆಯವರು ಅವರ ಅಸ್ತಿತ್ವವನ್ನು ಸತತವಾಗಿ ಕಾಣುತ್ತಿದ್ದರು, ಅವರ ದೇಹ-ರೂಪಗಳು ಬೇರೆಬೇರೆಯಾದರೂ ಅವರ ಶಕ್ತಿ ಮಾತ್ರ ಒಂದೇ ಆಗಿತ್ತು ಎಂದರು.

- Advertisement - 

ಸತ್ಸಂಗದಲ್ಲಿ ವನಜಾಕ್ಷಿ ಮೋಹನ್, ಕವಿತಾ ಗುರುಮೂರ್ತಿ, ರಶ್ಮಿ ವಸಂತ, ಯಶಸ್ವಿ, ಜಿ ಯಶೋಧಾ ಪ್ರಕಾಶ್, ನಾಗರಾಜ್, ಚೇತನ್, ಚೆನ್ನಕೇಶವ, ಅಂಬುಜಾ ಶಾಂತಕುಮಾರ್, ಕಾವೇರಿ ಸುರೇಶ್, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ಸುಧಾಮಣಿ, ಬಿ.ಸುಮನಾ, ದೇವೇಂದ್ರಪ್ಪ, ಭಾವನಾ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

Share This Article
error: Content is protected !!
";