ನಗರದೆಲ್ಲಡೆ ಶ್ರೀರಾಮನ ನಾಮಸ್ಮರಣೆ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ವಿವಿಧ ದೇವಸ್ಥಾನಗಳು ಹಾಗೂ ಗ್ರಾಮಾಂತರ ಪ್ರದೇಶದ ಹಲವಾರು ಕಡೆ ಪ್ರತಿವರ್ಷದಂತೆ ಈವರ್ಷವೂ ಮರ್ಯಾದ ಪುರುಷೋತ್ತಮ ಪ್ರಭುಶ್ರೀರಾಮಚಂದ್ರನ ರಾಮನವಮಿ ಉತ್ಸವ ಭಕ್ತಿ
, ಶ್ರದ್ದೆಯಿಂದ ಆಚರಿಸಲಾಯಿತು.

ನಗರದ ಖಾಸಗಿ ಬಸ್ ನಿಲ್ದಾಣದ ಎಸ್.ಆರ್.ಕಾಂಪ್ಲೆಕ್ಸ್ ಬಳಿ ವಿಶ್ವ ಹಿಂದೂ ಪರಿಷತ್, ಖಾಸಗಿ ಬಸ್ ನಿಲ್ದಾಣದಲ್ಲಿ ಏಜೆಂಟರ ಸಂಘ, ನಾಯಕನಹಟ್ಟಿ ರಸ್ತೆಯ ಶ್ರೀಕರೇಕಲ್ ಆಂಜನೇಯಸ್ವಾಮಿ ದೇವಸ್ಥಾನ, ಸೋಮಗುದ್ದು ರಸ್ತೆಯ ಆಂಜನೇಯಸ್ವಾಮಿ ದೇವಸ್ಥಾನ, ಹಳೇಟೌನ್ ಶ್ರೀರಾಮಮಂದಿರ, ಸೀತಾರಾಮ ಬಡಾವಣೆಯ ವರಪ್ರದಗಣಪತಿ ದೇವಸ್ಥಾನ, ಶ್ರೀದತ್ತಮಂದಿರ, ನೆಹರೂ ವೃತ್ತದ ಹರಿಪ್ರಸಾದ್ ಹೋಟೆಲ್ ಮುಂಭಾಗ, ಅನ್ನಪೂರ್ಣೆಶ್ವರ ಹೋಟೆಲ್, ಜಗಜೀವನರಾಂ ಕಾಲೋನಿಯ ತಿಮ್ಮಪ್ಪಸ್ವಾಮಿ ದೇವಸ್ಥಾನ ಹಲವಾರು ಕಡೆ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನಪಡೆದರಲ್ಲದೆ, ಪ್ರಸಾದ ರೂಪದಲ್ಲಿ ಪಾನಕ, ಕೋಸಂಬರಿ ಸ್ವೀಕರಿಸಿದರು.

ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ ಎಂದಿಗೂ ಆದರ್ಶರು, ಕರೇಕಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ದೇವಸ್ಥಾನ ಪ್ರಧಾನ ಆರ್ಚಕ ಸಿ.ಎನ್.ನಾಗಶಯನ ಗೌತಮ್ ಪೂಜಾ ವಿಧಿವಿಧಾನಗಳನ್ನು ನಡೆಸಿಕೊಟ್ಟರು.

 ಶ್ರೀರಾಮನವಮಿ ಬಗ್ಗೆ ಮಾತನಾಡಿದ ಆಧ್ಯಾತ್ಮಿಕ ಚಿಂತಕ ಡಾ.ಅನಂತರಾಮ್ ಗೌತಮ್, ಪ್ರಭುಶ್ರೀರಾಮಚಂದ್ರ ಜ್ಞಾನದ ಬೆಳಕನ್ನು ನೀಡಿ ಸರ್ವರಿಗೂ ಒಳಿತು ಮಾಡಿದ್ಧಾರೆ. ನಂಬಿದ ಭಕ್ತರ ಅಭ್ಯುದಯಕ್ಕೆ ಶ್ರಮಿಸಿದವರು. ಸದಾಕಾಲ ಪ್ರಭು ಶ್ರೀರಾಮಚಂದ್ರನ ಕೀರ್ತಿ ಶಾಶ್ವತವಾಗಿರುತ್ತದೆ. ಎಲ್ಲಾ ವರ್ಗದ ಜನರ ಆದರ್ಶದೇವರಾಗಿ ಶ್ರೀರಾಮಚಂದ್ರ ಗುರುತಿಸಿಕೊಂಡಿದ್ದಾರೆ. ರಾಮ ನಾಮಜಪದಿಂದ ಶಾಂತಿ ನೆಲೆಸುತ್ತದೆ ಎಂದರು.

ಪೂಜಾ ಕಾರ್ಯದಲ್ಲಿ ಎಸ್.ವೈ.ಮುರುಳೀಕೃಷ್ಣ, ಸಿ.ಎಸ್.ಗೋಪಿನಾಥ, ನರಸಿಂಹಮೂರ್ತಿ, ಎನ್.ಗೋಪಿನಾಥ, ಪಿ.ರವೀಂದ್ರನಾಥ, ಸುಬ್ಬಯ್ಯಶೆಟ್ಟಿ, ಡಿ.ಜಿ.ಪ್ರಕಾಶ್, ಬಸವರಾಜಪ್ಪ ಮುಂತಾದವರು ಭಾಗವಹಿಸಿದ್ದರು.

ವಿಶ್ವಹಿಂದೂಪರಿಷತ್ ಆಯೋಜಿಸಿದ್ದ ರಾಮನವಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಶ್ವಹಿಂದೂಪರಿಷತ್ ತಾಲ್ಲೂಕು ಅಧ್ಯಕ್ಷ ಡಾ.ಡಿ.ಎನ್.ಮಂಜುನಾಥ ಮಾತನಾಡಿ, ಶ್ರೀರಾಮನ ಭಕ್ತರ ನೂರಾರು ವರ್ಷಗಳ ಕನಸು ನನಸಾಗಿದೆ. ಅಯೋಧ್ಯೆಯಲ್ಲಿ  ಶ್ರೀರಾಮಮಂದಿರ ನಿರ್ಮಿಸುವ ಮೂಲಕ ಭಕ್ತರಕೋರಿಕೆ ಈಡೇರಿಸಿದೆ. ಶ್ರೀರಾಮಚಂದ್ರನ ಆದರ್ಶಗಳು ನಮ್ಮೆಲ್ಲರಿಗೂ ಶ್ರೀರಕ್ಷೆ ಎಂದರು. ಉಮೇಶ್, ಕೃಷ್ಣ, ಸಿದ್ದೇಶ್, ಮೋಹನ್, ಯಶ್ವಂತ್, ಕುಮಾರ್, ನಾಗೇಶ್, ಮೋಹನಕುಮಾರ್ ಮುಂತಾದವರು ಉಪಸ್ಥಿತರಿದ್ದರು.  ಹರಿಪ್ರಸಾದ್ ಹೋಟೆಲ್ ಮುಂಭಾಗದಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ  ಮಾರುತೇಶ್, ಕರೀಕೆರೆ ನಾಗರಾಜು, ಸಿ.ಯಶವಂತಕುಮಾರ್, ನಿರಂಜನಮೂರ್ತಿ, ಗೋಪಿನಾಥ್, ಕಿಶೋರಕುಮಾರಶೆಟ್ಟಿ, ಎಂ.ಪಿ.ಗುರುರಾಜ್, ಮುನಿಯಪ್ಪ, ಪ್ರೇಮಕುಮಾರ್, ಚಂದ್ರಶೇಖರ ಐತಾಳ್, ಜಗದೀಶ್, ರಾಘವೇಂದ್ರ ಪಾಲ್ಗೊಂಡು ಪಾನಕ, ಕೋಸಂಬರಿ ವಿತರಿಸಿದರು.

Share This Article
error: Content is protected !!
";