ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಷಟಲ್ ಬ್ಯಾಡ್ಮಿಂಟನ್ ಕ್ರೀಡೆಯನ್ನು ಹಂಚಿಕೆ ಮಾಡಿರುತ್ತಾರೆ. ಹೀಗಾಗಿ ಈ ಯೋಜನೆಯಡಿ ಷಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಚಿತ್ರದುರ್ಗ ನಗರದ ಬಾಲಕ ಮತ್ತು ಬಾಲಕಿಯರಿಗೆ ಉಚಿತ ತರಬೇತಿ ನೀಡಲಾಗುವುದು.
ಷಟಲ್ ಬ್ಯಾಡ್ಮಿಂಟನ್ ತರಬೇತಿ ಪಡೆಯಲು ಇಚ್ಚಿಸುವ ಹಾಗೂ ಕ್ರೀಡಾ ಆಸಕ್ತಿಯುಳ್ಳ 6 ರಿಂದ 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರು ಜಿ.ಕೆ.ಗುರುಮೂರ್ತಿ, ಖೇಲೋ ಇಂಡಿಯಾ ತರಬೇತುದಾರರು, ಒಳಾಂಗಣ ಕ್ರೀಡಾಂಗಣ, ಚಿತ್ರದುರ್ಗ ಇವರಲ್ಲಿ ಹೆಸರು ನೊಂದಾಯಿಸಬೇಕು. ಪಾಸ್‍ಪೋರ್ಟ್ ಸೈಜ್ ಫೋಟೋ, ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರವನ್ನು ಅಕ್ಟೋಬರ್ 05 ರೊಳಗಾಗಿ ನೀಡುವಂತೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9481038141 ಕ್ಕೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಷಟಲ್ ಬ್ಯಾಡ್ಮಿಂಟನ್: ಉಚಿತ ತರಬೇತಿ
