ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಪತ್ತಿನ ಸಹಕಾರ ಸಂಘದಲ್ಲಿ ಸೇವೆ ಎಂದು ಭಾವಿಸಿ ವ್ಯವಹಾರ ನಡೆಸಬೇಕೇ ಹೊರತು ನಾನೇ ಎಲ್ಲ ಎಂದು ಸಹಕಾರಿ ಸಂಘವನ್ನು ದುರ್ಬಳಕೆಗೆ ಕಾರಣರಾಗಬಾರದು ಎಂದು ಕುರುಬ ಸಮುದಾಯದ ಕುಲ ಗುರುಗಳಾದ ಕಾಗಿನೆಲೆ ಶಾಖಾ ಮಠದ ಶ್ರೀ ಶ್ರೀ ಸಿದ್ದ ರಾಮಾನಂದ ಸ್ವಾಮಿಗಳು ತಿಳಿಸಿದರು.
ನಗರದ ಹೊರವಲಯದ ನೆಲಮಂಗಲ ರಸ್ತೆಯ ಕನಕದಾಸ ವೃತ್ತದಲ್ಲಿರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘದಲ್ಲಿ 2025ನೇ ನೂತನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದಲ್ಲಿ ಸಹಕಾರಿ ವ್ಯವಸ್ಥೆ ಬಹಳ ದೊಡ್ಡ ವ್ಯವಸ್ಥೆಯಾಗಿ ವಿಸ್ತರಣೆ ಯಾಗಿದೆ.
ಈ ಸಮಾಜದಲ್ಲಿ ರೈತರು ವ್ಯಾಪಾರಸ್ಥ ಸಂಘ ಸಂಸ್ಥೆಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವದರಿಂದ ಸಮಾಜದ ಎಲ್ಲಾ ವರ್ಗದ ಜನತೆಗೆ ಸಹಕಾರಿಯಾಗಿದೆ ಆದ್ದರಿಂದ ಯಾರು ಸಹ ತಮ್ಮ ಪ್ರತಿಷ್ಠೆ ಗೋಸ್ಕರ ಈ ಪತ್ತಿನ ಸಹಕಾರ ಸಂಘ ವನ್ನ ದುರ್ಬಳಕೆ ಮಾಡಬಾರದು ಹಾಗು ಮನುಷ್ಯ ಬದುಕಿಗಾಗಿ ಸಂಘಟನೆ ಮಾಡುವುದಕ್ಕಾಗಿ ಹಾಗು ಸಮಾಜದಲ್ಲಿ ಗುರುತಿಸಿ ಕೊಳ್ಳುವುದಕ್ಕಾಗಿ ರಾಜಕೀಯವೇ ಅಲ್ಲ ಸಹಕಾರಿ ಸಂಘವು ಸಹಕಾರಿಯಾಗಿದೆ ಮತ್ತು ಬೇರೆಯವರ ದ್ವೇಷ ಕ್ಕೋಸ್ಕರ ಕಾಲೆಳೆಯುವುದು ಸಂಘ ಅಭಿವೃದ್ದಿಗೆ ಹಿನ್ನೆಡೆ ಯಾಗಲಿದೆ ಹಾಗು ಸಹಕಾರ ಸಂಘದಿಂದ ತಮ್ಮ ಅವದಿ ಮುಗಿದ ನಂತರ ಮತ್ತೊಬ್ಬರಿಗೆ ಅವಕಾಶ ಮಾಡಿಕೊಡಬೇಕು ಎಂದರು.
ಈ ಸಮಯದಲ್ಲಿ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರವಿ, ಉಪಾಧ್ಯಕ್ಷ ,ಮಂಜುನಾಥ ಹೆಚ್ ಇ,ನಿರ್ದೆಶಕರಾದ ಮುನಿರಾಜು, ಕೆ ಎಲ್ ಗಂಗರಾಜು, ಡಿ ಎಲ್ ವೆಂಕಟೇಶ, ಹೆಚ್ ಮಂಜುನಾಥ (ಆಟೋ), ಪಾಪಣ್ಣ, ಎಂ ಎಲ್ ಕೃಷ್ಣ ಮೂರ್ತಿ, ಡಿ ಎಲ್ ಗಜಲಕ್ಷ್ಮೀ, ಮಾಧವಿ, ಗೌರಮ್ಮ, ಸಿ ಮುತ್ತು ರಾಜು, ಕೆ ಎಲ್ ಮಂಜುನಾಥ, ಹಾಗು ಸಮಾಜದ ಮುಖಂಡರು ಹಾಜರಿದ್ದರು.