ಕಾಡುಗೊಲ್ಲ ಯುವ ಘಟಕದ ಅಧ್ಯಕ್ಷರಾಗಿ ಸಿದ್ದಾಪುರ ವೀರೇಶ್ ಅಧಿಕಾರ ಸ್ವೀಕಾರ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಾಡುಗೊಲ್ಲ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡುವ ಅನಿರ್ವಾಯತೆ ಹೆಚ್ಚಿದೆ‌. ಸಮುದಾಯ ಮೌಢ್ಯಗಳಿಂದ ಹೊರಬಂದು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಗೊಲ್ಲ ಸಮುದಾಯದ ತಾಲೂಕು ಅಧ್ಯಕ್ಷ ಟಿ.ರವಿಕುಮಾರ್ ಹೇಳಿದರು.

ಅವರು ನಗರದ ಯಾದವರ ಹಾಸ್ಟೆಲ್ ನಲ್ಲಿ ಕಾಡುಗೊಲ್ಲ ಯುವ ಘಟಕದ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಗೊಂಡ ಸಿದ್ದಾಪುರ ವೀರೇಶ್ ಅವರಿಗೆ ಸನ್ಮಾನ ಹಾಗೂ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿ, ಕಾಡುಗೊಲ್ಲರು ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಬದ್ಧತೆ ಹೆಚ್ಚಬೇಕಿದೆ, ಕಾಡುಗೊಲ್ಲ ಸಮುದಾಯ ಆಧುನಿಕತೆಯಲ್ಲೂ ಮೌಡ್ಯಗಳು ಆಚರಣೆ ಮಾಡುತ್ತಿದ್ದಾರೆ ಅದರಿಂದ ಹೊರ ಬರಲು ಶಿಕ್ಷಣ ಒಂದೇ ದಾರಿಯಾಗಿದೆ‌. ಅನಿಷ್ಟ ಪದ್ಧತಿಗಳಿಂದ ಹೊರಬರುವ ಪ್ರಯತ್ನ ಮಾಡಬೇಕಿದೆ. ಆಚರಣೆಗಳ ಹೆಸರಿನಲ್ಲಿ ಶಿಕ್ಷಣದಿಂದ ವಂಚಿತರಾಗುವುದು ಬೇಡ, ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವತ್ತ ಹೆಚ್ಚಿನ ಒತ್ತು ನೀಡಬೇಕು, ಯುವಘಟಕ ಸಮುದಾಯದ ಸಂಘಟನೆಗೆ ಹೆಚ್ಚಿನ‌ಮಹತ್ವ ನೀಡಬೇಕು, ಸಮುದಾಯದ ಯುವಕರನ್ನು ಒಂದಾಗಿಸಿ ಸಾಮಾಜಿಕ ಶಕ್ತಿ ತುಂಬುವ ಕಾರ್ಯ ಮಾಡಬೇಕು ಎಂದರು.

- Advertisement - 

ನೂತನವಾಗಿ ಆಯ್ಕೆಯಾದ ತಾಲೂಕು ಕಾಡುಗೊಲ್ಲ ಯುವ ಘಟಕದ ಅಧ್ಯಕ್ಷ ಸಿದ್ದಾಪುರ ವೀರೇಶ್ ಮಾತನಾಡಿ, ನನ್ನ ಕಾರ್ಯವನ್ನು ಗುರುತಿಸಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ‌.  ಸಮುದಾಯದ ಯುವಕರನ್ನು  ಒಗ್ಗೂಡಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುವೆ. ಕಾಡುಗೊಲ್ಲ ಸಮುದಾಯದ  ಹಿರಿಯ ಮುಖಂಡರು ನನ್ನ ಮೇಲೆ ಹೆಚ್ವಿನ ಜವಾಬ್ದಾರಿಯನ್ನು ಹೊರಿಸಿದ್ದಾರೆ. ಅವರ ನಂಬಿಕೆಗೆ ಚ್ಯುತಿಬಾರದಂತೆ ಕಾರ್ಯನಿರ್ವಹಿಸುವೆ.  ಸಮುದಾಯಕ್ಕೆ ನ್ಯಾಯವನ್ನು ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವೆ. ಯುವಕರನ್ನು ಒಗ್ಗೂಡಿಸಿ ಸಮುದಾಯಕ್ಕೆ ಬೇಕಿರುವ ಶಕ್ತಿ ತುಂಬುವ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುವೆ. ಯುವ ಮುಖಂಡರ ಹಾಗೂ ಸಮುದಾಯದ ಹಿರಿಯರ ಮಾರ್ಗದರ್ಶನದಲ್ಲಿ ಸಮುದಾಯಕ್ಕೆ ಮತ್ತಷ್ಟು ಬಲ ತುಂಬುವ ಕೆಲಸವನ್ನು ಮಾಡುವೆ.  ಶೈಕ್ಷಣಿಕ ಸಾಮಾಜಿಕ ಬಲಗೊಳ್ಳಲು ಅಗತ್ಯವಿರುವ ಎಲ್ಲಾ ಕಾರ್ಯಗಳಲ್ಲಿ ತೊಡಗಿಕೊಂಡು ಕಾಡುಗೊಲ್ಲ ಸಮುದಾಯಕ್ಕೆ ಮತ್ತಷ್ಟು ಬಲ ತುಂಬುವ ಕೆಲಸ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಕಾಡುಗೊಲ್ಲ ಸಂಘದ ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ತಾಲೂಕು ಗೊಲ್ಲ ನೌಕರ ಸಂಘದ ಅಧ್ಯಕ್ಷ ಕೆ. ಎಸ್. ಶ್ರೀಕಾಂತ್, ಜೆ,ಟಿ.ಶಶಿಧರ, ನಿವೃತ್ತ ಪ್ರಾಂಶುಪಾಲ ದೇವೇಂದ್ರಪ್ಪ, ಮುಖಂಡರಾದ ವೈ.ಕಾಂತರಾಜ್, ಎಚ್.ಮಾಲಿಂಗಪ್ಪ, ಶ್ರೀನಿವಾಸ್, ಭಾನುವೀರೇಶ್, ಮಂಜುನಾಥ, ಸುರೇಶ್, ಜೋಗಿ ತಿಪ್ಪೇಶ್ ಮುಂತಾದವರು ಉಪಸ್ಥಿತರಿದ್ದರು.

- Advertisement - 

 

Share This Article
error: Content is protected !!
";