ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಂಗಳಲ್ಲಿ 4 ಬಾರಿ ದೆಹಲಿ ಪ್ರವಾಸ ಕೈಗೊಂಡು, ನಕಲಿ ಗಾಂಧಿಗಳ ಪಾದಪೂಜೆ ಮಾಡಿ ಬರುತ್ತಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಪದೇ ಪದೆ ದೆಹಲಿ ಪರೇಡ್‌ಮಾಡುವುದು ಜನರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಲ್ಲ, ಬದಲಾಗಿ ಕಾಂಗ್ರೆಸ್‌ಪಕ್ಷದೊಳಗಿನ ಕುರ್ಚಿ ಕಿತ್ತಾಟದ ದೂರನ್ನು ನೀಡಲಷ್ಟೇ.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಹೈಕಮಾಂಡ್‌ಭೇಟಿಯ ವೇಳೆ ಕುರ್ಚಿ ಕಿತ್ತಾಟದ ದೂರಿನ ಜೊತೆ ಈ ಕೆಳಗಿನ ಅಂಶಗಳನ್ನೂ ಮನವರಿಕೆ ಮಾಡಿ ಎಂದು ಬಿಜೆಪಿ ತಾಕೀತು ಮಾಡಿದೆ.
ಅಧಿಕಾರಕ್ಕೆ ಬಂದ 20 ತಿಂಗಳಿನಲ್ಲಿ 3 ಬಾರಿ ಹಾಲಿನ ಬೆಲೆ ಏರಿಕೆ ಮಾಡಲಾಗಿದೆ. ಪ್ರತೀ ಲೀಟರ್‌ಹಾಲಿಗೆ 9 ರೂ. ಜಾಸ್ತಿ ಮಾಡಿ ಜನರ ಕಿಸೆ ಭಾರ ಮಾಡಲಾಗಿದೆ. ವಿದ್ಯುತ್‌ದರ ಏರಿಕೆಯ ಮೂಲಕ ಶಾಕ್‌ನೀಡಲಾಗಿದೆ. ನೀರಿನ ದರ ಏರಿಕೆ ಮೂಲಕ ಗಂಟಲು ಒಣಗಿಸಲಾಗಿದೆ. ಹಗರಣಗಳ ಮೂಲಕ ಹಣ ಲೂಟಿ ಮಾಡಲಾಗಿದೆ. ಗ್ಯಾರಂಟಿ ಮುನ್ನಡೆಸಲು ಜನರ ಜೇಬಿಗೆ ಕತ್ತರಿ ಹಾಕಲಾಗಿದೆ. ಡಿಕೆಶಿ ಹಣಿಯಲು ಹನಿಟ್ರ್ಯಾಪ್‌ಬಾಂಬ್‌ಹಾಕಲಾಗಿದೆ. ಸಿಎಂ ಕುರ್ಚಿ ಗಟ್ಟಿ ಮಾಡಿಕೊಳ್ಳಲು ದಲಿತ ಸಚಿವರನ್ನು ಛೂ ಬಿಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.