ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2024ರ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಸ್ವಯಂ ಘೋಷಿತ ಆರ್ಥಿಕ ತಜ್ಞರಾದ ಸಿದ್ದರಾಮಯ್ಯ ಅವರು 2025ರ ಮಾರ್ಚ್‌ಒಳಗೆ 6 ಲಕ್ಷ ಮನೆಗಳನ್ನು ನಿರ್ಮಿಸುವುದಾಗಿ ಹೇಳಿ ಬುರುಡೆ ಬಿಟ್ಟಿದ್ದಾರೆ ಎಂದು ಬಿಜೆಪಿ ಹರಿಹಾಯ್ದಿದೆ.
ಲೂಟಿ ಹೊಡೆಯುವುದರಲ್ಲೇ ನಿರತರಾಗಿರುವ ಸಿದ್ದರಾಮಯ್ಯ ಹಗರಣಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಷಡ್ಯಂತ್ರ ರೂಪಿಸುವುದರಲ್ಲೇ ಮಳುಗಿ ಹೋಗಿದ್ದಾರೆ. ಒಂದು ಕಡೆ ಘೋಷಿಸಿದ ಗ್ಯಾರಂಟಿಗಳನ್ನು ಪೂರೈಸಲು ಆಗುತ್ತಿಲ್ಲ. ಬಜೆಟ್‌ನಲ್ಲಿ ಘೋಷಿಸಿದ ಮನೆಗಳನ್ನು ನಿರ್ಮಿಸಲು ಕೈಲಾಗುತ್ತಿಲ್ಲ.
ಸೂರಿಗಾಗಿ ಸುಮಾರು 9 ಲಕ್ಷ ಕುಟುಂಬಗಳು ಬೀದಿಯಲ್ಲಿ ಇನ್ನೂ ಕಾಯುತ್ತಾ ನಿಂತಿವೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.

