ಸಿದ್ದರಾಮಯ್ಯ ‘ಅನ್ನರಾಮಯ್ಯ’ ಅಲ್ಲ, ‘ಕನ್ನರಾಮಯ್ಯ’: ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿತವಾದ ಮಾತುಗಳ ಮೂಲಕ ವಾಗ್ದಾಳಿ ನಡೆಸಿದ್ದಾರೆ. ದಾವಣಗೆರೆಯಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು
, ಪಡಿತರ ವಿತರಣೆ ಮತ್ತು ಕುಟುಂಬ ರಾಜಕಾರಣದ ವಿಷಯವಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

​ಪಡಿತರ ಮತ್ತು ಅಕ್ಕಿ ವಿಚಾರದಲ್ಲಿ ಟೀಕೆ-
​ಕೇಂದ್ರ ಸರ್ಕಾರ ನೀಡುತ್ತಿರುವ ಪಡಿತರವನ್ನು ರಾಜ್ಯ ಸರ್ಕಾರ ತನ್ನದು ಎಂಬಂತೆ ಬಿಂಬಿಸಿಕೊಳ್ಳುತ್ತಿದೆ ಎಂದು ದೂರಿದ ಕುಮಾರಸ್ವಾಮಿ
, “ಸಿದ್ದರಾಮಯ್ಯ ಅವರನ್ನು ಅನ್ನರಾಮಯ್ಯ ಎನ್ನುವುದಕ್ಕಿಂತ ಕನ್ನರಾಮಯ್ಯಎನ್ನಬಹುದು. ಕೇಂದ್ರದಿಂದ ಬಂದ ಅಕ್ಕಿಯನ್ನು ಹಂಚಿ ತಾವು ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ,” ಎಂದು ವ್ಯಂಗ್ಯವಾಡಿದರು.

- Advertisement - 

​ವಸತಿ ಮತ್ತು ಅಭಿವೃದ್ಧಿ ಕುಂಠಿತ ಆಗಿದೆ ಎಂದು ​ರಾಜ್ಯ ಸರ್ಕಾರದ ಆರ್ಥಿಕ ನಿರ್ವಹಣೆಯನ್ನು ಪ್ರಶ್ನಿಸಿದರು.
​ಮನೆಗಳ ನಿರ್ಮಾಣ: 15 ಲಕ್ಷ ಮನೆಗಳ ನಿರ್ಮಾಣಕ್ಕೆ 28 ಸಾವಿರ ಕೋಟಿ ರೂಪಾಯಿ ಬೇಕಿತ್ತು. ಆದರೆ ಸರ್ಕಾರ ಕೇವಲ 2 ಸಾವಿರ ಕೋಟಿ ರೂಪಾಯಿ ಮಾತ್ರ ಮೀಸಲಿಟ್ಟಿದೆ.

​ಗ್ಯಾಸ್ ಪೂರೈಕೆ: ಜಾಗತಿಕ ಮಟ್ಟದಲ್ಲಿ ಗ್ಯಾಸ್ ಪೂರೈಕೆ ಕಷ್ಟವಿದ್ದರೂ, ಪ್ರಧಾನಿ ಮೋದಿ ಅವರು ವಿದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಗ್ಯಾಸ್ ಆಮದು ಮಾಡಿಕೊಳ್ಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಈ ಬಗ್ಗೆ ಸುಳ್ಳು ಆರೋಪ ಮಾಡುತ್ತಿದೆ.

- Advertisement - 

​ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಅಣಕ-
​ಕುಟುಂಬ ರಾಜಕಾರಣದ ಆರೋಪಕ್ಕೆ ತಿರುಗೇಟು ನೀಡಿದ ಹೆಚ್‌ಡಿಕೆ
, “ನಮ್ಮ ಕುಟುಂಬದ ಬಗ್ಗೆ ಮಾತನಾಡುವ ನೀವು, ನಿಮ್ಮ ಮಗನನ್ನು ರಾಜಕೀಯಕ್ಕೆ ತಂದಿದ್ದು ಏಕೆ? ಟ್ರಾನ್ಸ್‌ಫರ್ ದಂಧೆ ಮಾಡಲು ತಂದಿದ್ದೀರಾ?” ಎಂದು ಪ್ರಶ್ನಿಸಿದರು. ಅಲ್ಲದೆ, ‘ಅಪ್ಪಯ್ಯ ಅಪ್ಪಯ್ಯಎನ್ನುತ್ತಾ ಯತೀಂದ್ರ ಸಿದ್ದರಾಮಯ್ಯ ಅವರನ್ನು ಅಣಕಿಸಿದರು. 

​ಅಹಿಂದ ಮತ್ತು ಜಾತ್ಯತೀತ ವಾದದ ಪ್ರಶ್ನೆ-
​”ಸಿದ್ದರಾಮಯ್ಯ ಅವರು ಅಧಿಕಾರವಿದ್ದಾಗ ಅಹಿಂದವನ್ನು ಮರೆಯುತ್ತಾರೆ, ಕುರ್ಚಿ ಅಲುಗಾಡಿದಾಗ ಮಾತ್ರ ಅಹಿಂದ ಜಪ ಮಾಡುತ್ತಾರೆ. ಇದೆಲ್ಲವೂ ಕೇವಲ ನಾಟಕ,” ಎಂದು ಟೀಕಿಸಿದರು. ಅಲ್ಲದೆ, ಜೆಡಿಎಸ್‌ನಲ್ಲಿದ್ದಾಗ ಅವರು ಏನು ಮಾಡಿದ್ದರು ಎಂಬುದು ನಮಗೆ ತಿಳಿದಿದೆ ಎಂದು ಕುಟುಕಿದರು.

​ಉಪಚುನಾವಣೆ ಮತ್ತು ಭ್ರಷ್ಟಾಚಾರದ ಆರೋಪ-
​ಖಾಲಿ ವಿಧಾನಸೌಧ: ಚುನಾವಣಾ ಪ್ರಚಾರಕ್ಕಾಗಿ ಸಚಿವರು ಹೋಗಿರುವುದರಿಂದ ವಿಧಾನಸೌಧ ಖಾಲಿ ಹೊಡೆಯುತ್ತಿದೆ.

​ಹಗರಣಗಳು: ವಾಲ್ಮೀಕಿ ಹಗರಣದ ಬಗ್ಗೆ ಸ್ವತಃ ಸಿಎಂ ಅವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ.

​ಜಾತಿ ಗಣತಿ: “ನಿಮ್ಮದೇ ಸರ್ಕಾರವಿದ್ದರೂ ಕಾಂತರಾಜ್ ವರದಿ ಬಿಡುಗಡೆ ಮಾಡಲು ಹಿಂಜರಿಯುತ್ತಿರುವುದು ಏಕೆ?” ಎಂದು ಸವಾಲು ಹಾಕಿದರು.

​ಪ್ರಮುಖ ಪ್ರಶ್ನೆ: “ಜಿಡಿಪಿಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಹೇಳುತ್ತೀರಿ. ಹಾಗಿದ್ದ ಮೇಲೆ ರಾಜ್ಯ ಇಷ್ಟು ಸಂಪದ್ಭರಿತವಾಗಿದ್ದರೆ ಇಲ್ಲಿ ಗ್ಯಾರಂಟಿ ಯೋಜನೆಗಳ ಅವಶ್ಯಕತೆ ಏನಿದೆ?” ಎಂದು ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.

 

 

Share This Article
error: Content is protected !!
";