ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ಪೀಕರ್ ಖಾದರ್ ಸಾಹೇಬರು ಯಾವಾಗ ನ್ಯಾಯಾಧೀಶರಾದರು? ಎಂದು ವಿಪಕ್ಷ ನಾಯಕ ಆರ್.ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಕೊಲೆ ಆರೋಪಿಯ ಕುಟುಂಬಸ್ಥರ ಹೇಳಿಕೆಯನ್ನೇ ಸಾಕ್ಷಿಯಾಗಿ ಪರಿಗಣಿಸಿ ಖುಲಾಸೆ ಮಾಡುವ ಕಾನೂನು ಯಾವಾಗ ಜಾರಿಯಾಯ್ತು?
ಅಥವಾ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಹಾದಿಬೀದಿಯಲ್ಲಿ ಪ್ರದರ್ಶನ ಮಾಡುವ ಕೆಂಪು ಸಂವಿಧಾನ ಪುಸ್ತಕದಲ್ಲಿ ಹೀಗೆ ಇದೆಯಾ? ಎಂದು ಅಶೋಕ್ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದ್ದಾರೆ.
ಸ್ಪೀಕರ್ ಹುದ್ದೆಯಂತಹ ಪ್ರಭಾವಿ ಸ್ಥಾನದಲ್ಲಿರುವವರು ಹೀಗೆ ತನಿಖೆಗೆ ಮುಂಚೆಯೇ ಆರೋಪಿಗಳಿಗೆ ಕ್ಲೀನ್ ಚಿಟ್ ಕೊಟ್ಟುಬಿಟ್ಟರೆ ಪೊಲೀಸರಿಗೆ ಏನು ಸಂದೇಶ ಹೋಗುತ್ತದೆ?
ರಾಜ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಈ ಧೋರಣೆ ನೋಡುತ್ತಿದ್ದರೆ, ಸಹೋದರ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನ ಮುಚ್ಚಿಹಾಕಲು ಸಿಎಂ ಸಿದ್ದರಾಮಯ್ಯ ಅವರು ನಿರ್ಧರಿಸಿದಂತಿದೆ ಎಂದು ಅಶೋಕ್ ಆರೋಪಿಸಿದ್ದಾರೆ.