ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯ ಅವರು ಎಸಿ ರೂಮಿನಲ್ಲಿ ತಯಾರಿಸಿದ ಜಾತಿಗಣತಿ ವರದಿಯನ್ನು ಡಿ.ಕೆ ಶಿವಕುಮಾರ್ ವಿರೋಧದ ಹಿನ್ನೆಲೆಯಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕಸದ ಬುಟ್ಟಿಗೆ ಎಸೆದಿದೆ ಎಂದು ಬಿಜೆಪಿ ಟೀಕಿಸಿದೆ.
ಈ ಮೂಲಕ 10 ವರ್ಷಗಳ ಹಿಂದಿನ ದತ್ತಾಂಶದ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸಿದ್ದ ಸಿದ್ದರಾಮಯ್ಯ ಅವರಿಗೆ ಮುಖಭಂಗವಾಗಿದೆ. ಅವೈಜ್ಞಾನಿಕ ದತ್ತಾಂಶವೆಂದು ಸ್ವತಃ ಡಿ. ಕೆ. ಶಿವಕುಮಾರ್ ಅವರೇ ಈಗ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ.
ಕೇಂದ್ರ ಸರ್ಕಾರವೇ ಮುಂದಿನ ದಿನಗಳಲ್ಲಿ ಜನಗಣತಿ ಜೊತೆಗೆ ಜಾತಿ ಗಣತಿ ನಡೆಸುವುದಕ್ಕೆ ತೀರ್ಮಾನ ಮಾಡಿರುವುದರಿಂದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಮರು ಸಮೀಕ್ಷೆಗೆ ದುಂದು ವೆಚ್ಚ ಮಾಡುವ ಅಗತ್ಯವಿಲ್ಲ. ಸಿಎಂ ಹಾಗೂ ಡಿಸಿಎಂ ಅವರ ಒಳಜಗಳಕ್ಕೆ ಜನರ ಕೋಟ್ಯಂತರ ತೆರಿಗೆ ಹಣ ಪೋಲು ಮಾಡದಿರಿ ಎಂದು ಬಿಜೆಪಿ ಆರೋಪಿಸಿದೆ.