ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯುವ ತಾಕತ್ತು ಸಿದ್ದರಾಮಯ್ಯ ಅವರಿಗಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಬಿಜೆಪಿ  ಗಂಭೀರವಾಗಿ ಪರಿಗಣಿಸಿದೆ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದ ಹೊರತು ವಿಶ್ರಮಿಸುವುದಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ವಿರೋಧ ಪಕ್ಷದ ನಾಯಕ ಅಶೋಕ್, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಕರಣದ ನಡೆದಾಗ ಶಾಸಕರಾಗಿದ್ದ ಪ್ರಿಯಾಂಕ್ ಖರ್ಗೆ ಅವರು ಏನು ಹೇಳಿದ್ದರು ಅನ್ನೋದನ್ನು ಮಾಧ್ಯಮಗಳಿಗೆ ಓದಿ ಹೇಳಿದ ಅಶೋಕ, ಅವರು ಆಗ ಹೇಳಿದ್ದನ್ನು ಈಗ ಸಚಿವರಾಗಿರುವ ಖರ್ಗೆ ಅವರಿಗೆ ಕೇಳುತ್ತೇವೆ ಎಂದು ತಿಳಿಸಿದರು.

ಈಶ್ವರಪ್ಪ ನಿರ್ದೋಷಿಯೆಂದು ನ್ಯಾಯಲಯ ತೀರ್ಪು ನೀಡಿತ್ತು ಎಂದು ಹೇಳಿದ ಅಶೋಕ, ಪ್ರಿಯಾಂಕ್ ಖರ್ಗೆಯ ರಾಜೀನಾಮೆ ಪಡೆಯುವ ತಾಕತ್ತು ಸಿದ್ದರಾಮಯ್ಯ ಅವರಿಗಿಲ್ಲ ಎಂದು ಅಶೋಕ್ ಆರೋಪಿಸಿದರು.

 

 

 

- Advertisement -  - Advertisement - 
Share This Article
error: Content is protected !!
";