ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಷ್ಟ್ರಮಟ್ಟದಲ್ಲಿ ಒಬಿಸಿ ಹೊಣೆಗಾರಿಕೆ ನೀಡಿದರೂ ಸಿದ್ದರಾಮಯ್ಯ ಸಿಎಂ ಹುದ್ದೆ ಬಿಡಬೇಕಿಲ್ಲ ಎಂದು ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಬ್ಬರು ದೆಹಲಿ ಭೇಟಿ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿಲ್ಲ. ಸಿದ್ದರಾಮಯ್ಯರನ್ನು ಎಐಸಿಸಿ ಒಬಿಸಿ ಸಲಹಾ ಮಂಡಳಿಯಲ್ಲಿ ಸದಸ್ಯನಾಗಿ ಆಯ್ಕೆ ಮಾಡಿರೋದು ಅವರಿಗಿರುವ ಅಪಾರ ಅನುಭವವನ್ನು ರಾಷ್ಟ್ರಮಟ್ಟದಲ್ಲಿ ಬಳಸಿಕೊಳ್ಳಲು, ಅದರಲ್ಲಿ ತಪ್ಪೇನಿದೆ? ಎಂದು ಸತೀಶ್ ಪ್ರಶ್ನಿಸಿದರು.
ಒಬಿಸಿ ಸಲಹಾ ಮಂಡಳಿಗೆ ನೇಮಕವಾಗಿದ್ದರಿಂದ ಅವರು ದೆಹಲಿಗೆ ಹೋಗಬೇಕಿಲ್ಲ ಮತ್ತು ಸಿಎಂ ಹುದ್ದೆ ಬಿಡಬೇಕಿಲ್ಲ ಎಂದು ಹೇಳಿದ ಸಚಿವರು, ಸಿದ್ದರಾಮಯ್ಯ ಹೆಚ್ಚುವರಿ ಜವಾಬ್ದಾರಿಯನ್ನು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಕಾದು ನೋಡಬೇಕು ಎಂದು ತಿಳಿಸಿದರು.