ಸಿದ್ದರಾಮಯ್ಯನವರೇ ದರ್ಪ, ಅಹಂಕಾರವನ್ನು ಜಿಲ್ಲಾಧಿಕಾರಿಗಳ ಮೇಲೆ ತೋರಿಸಬೇಡಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿದ್ದರಾಮಯ್ಯ ಅವರೇ ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ನಿಮ್ಮ ದರ್ಪ, ಅಹಂಕಾರವನ್ನು ಜಿಲ್ಲಾಧಿಕಾರಿಗಳ ಮೇಲೆ ತೋರಿಸಬೇಡಿ ಎಂದು ಜೆಡಿಎಸ್ ಕಿವಿ ಮಾತು ಹೇಳಿದೆ.

ಸಭೆ ಸಮಾರಂಭಗಳಲ್ಲಿ, ಸಾರ್ವಜನಿಕ ವೇದಿಕೆಯಲ್ಲಿ ಈ ರೀತಿಯ ಸರ್ವಾಧಿಕಾರಿ ವರ್ತನೆ ಖಂಡನೀಯ ಸಿದ್ದರಾಮಯ್ಯ. ನಿಮ್ಮ ಸಿಟ್ಟು, ಅಸಹನೆಯನ್ನು ಪಕ್ಷದ ಕಚೇರಿಯಲ್ಲಿ ಪ್ರದರ್ಶಿಸಿಕೊಳ್ಳಿ.

  ಜಿಲ್ಲಾಧಿಕಾರಿಗಳ ಮೇಲೆ ದರ್ಪ ತೋರಿಸಬೇಡಿ. ಇದು ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿಗೆ ಶೋಭೆಯಲ್ಲ! ಎಂದು ಜೆಡಿಎಸ್ ಎಚ್ಚರಿಸಿದೆ.

 

- Advertisement -  - Advertisement - 
Share This Article
error: Content is protected !!
";