ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಲ್ಲರಿಗೂ 200 ಯೂನಿಟ್ ಫ್ರೀ ಕರೆಂಟ್‌ಎಂದು ಪುಂಗಿ ಊದಿದ ಸಿದ್ದರಾಮಯ್ಯ ಸರ್ಕಾರ, ಈಗ ಆ ಮೀಟರ್ ದರವನ್ನೇ 800% ಏರಿಕೆ ಮಾಡಿ ಜನತೆಗೆ ಶಾಕ್ ನೀಡಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಅಧಿಕಾರಕ್ಕೆ ಬಂದ ಮರುಕ್ಷಣವೇ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ವಿದ್ಯುತ್‌ದರ ಏರಿಕೆ ಮೂಲಕ ಜನಸಾಮಾನ್ಯರಿಗೆ ಶಾಕ್‌ಕೊಟ್ಟಿತ್ತು. ಈಗ ಮೀಟರ್ ದರವನ್ನು ರಾಜ್ಯದ ಇತಿಹಾಸದಲ್ಲೇ ಅತ್ಯಧಿಕ ದರ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಒಂದು ಕಡೆ ಉಚಿತ ಎನ್ನುತ್ತಲೇ ಜನಸಾಮಾನ್ಯರ ಕಿಸೆಯಿಂದ ದುಪ್ಪಟ್ಟು ಹಣವನ್ನು ಕಾಂಗ್ರೆಸ್‌ಸರ್ಕಾರ ಲೂಟಿ ಹೊಡೆಯುತ್ತಿದೆ ಎಂದು ಬಿಜೆಪಿ ದೂರಿದೆ.
ನಿತ್ಯ ಬೆಲೆಯೇರಿಕೆಯ ಬರೆ ಎಳೆಯುವುದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕಾಯಕವಾಗಿದೆ. ಕಾಂಗ್ರೆಸ್ ಆಡಳಿತಕ್ಕೆ ಬಂದ ನಂತರ ದರ ಏರಿಸದ ವಲಯ ಯಾವುದೂ ಉಳಿದಿಲ್ಲ. ನಿತ್ಯ ಲೂಟಿಗೆ ನಿಂತು ಜನಸಾಮಾನ್ಯರ ಬದುಕನ್ನು ದುರ್ಬಲಗೊಳಿಸುತ್ತಿದೆ ಎಂದು ಬಿಜೆಪಿ ಹರಿಹಾಯ್ದಿದೆ.

