ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆಯ ಹೊಡೆತಕ್ಕೆ ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ ಎಂದು ಜೆಡಿಎಸ್ ದೂರಿದೆ.
ಸಿದ್ದರಾಮಯ್ಯ ಸರ್ಕಾರದ ಹಿಟ್ಲರ್ ಆಡಳಿತದಲ್ಲಿ ನಾಗರಿಕರ ಮೇಲೆ ಪ್ರತಿ ದಿನ ದರ ಏರಿಕೆಯ ದಾಳಿ ನಿರಂತರವಾಗಿ ನಡೆಯುತ್ತಿದೆ.
ಈಗ ಹೊಸ ದಾಳಿ ಆಸ್ತಿ ತೆರಿಗೆ ಜೊತೆ ತ್ಯಾಜ್ಯಕ್ಕೂ ಶುಲ್ಕ ! ಹಾಲಿನ ದರ ಏರಿಕೆ, ಮೊಸರಿನ ದರ ಏರಿಕೆ, ವಿದ್ಯುತ್ ದರ ಏರಿಕೆ, ವಿದ್ಯುತ್ ನಿರ್ವಹಣಾ ಶುಲ್ಕ ಏರಿಕೆ, ನೀರಿನ ದರ ಏರಿಕೆ ಮಾಡಿದೆ. ರಾಜ್ಯದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾದ ಆಡಳಿತ ಕಸಕ್ಕಿಂತಲೂ ಕಡೆಯಾಗಿದೆ.
ಅಭಿವೃದ್ಧಿ ಕಾರ್ಯಗಳನ್ನು ಹಳ್ಳಹಿಡಿಸಿ, ಬೆಲೆ ಏರಿಕೆ ಎಂಬ ಅಸ್ತ್ರಗಳನ್ನು ಪ್ರಯೋಗಿಸಿ ಜನಸಾಮಾನ್ಯರ ಬದುಕನ್ನು ಕಸಿಯುತ್ತಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.