ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಿಕ್ಕೆಟ್ಟ ನೀತಿಗಳಿಂದ ದಿವಾಳಿಯಾಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬಳಿ ಮೀನುಗಾರರಿಗೆ ಜೀವರಕ್ಷಕ (ಲೈಫ್ ಜಾಕೆಟ್) ನೀಡಲು ಹಣವೇ ಇಲ್ಲ.! ಇದರಿಂದ ಪ್ರಾಣಭೀತಿಯಲ್ಲೇ ಮೀನುಗಾರರು ಸಮುದ್ರಕ್ಕೆ ಇಳಿಯುವಂತಾಗಿದೆ.! ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.
ಸಿಎಂ ಸಿದ್ದರಾಮಯ್ಯ ಸರ್ಕಾರದ ನಿರ್ಲಕ್ಷ್ಯದ ನಡೆಯಿಂದ ಮೀನುಗಾರಿಕೆ ಇಲಾಖೆ ದುಡ್ಡಿಲ್ಲದೆ ಬಳಲುತ್ತಿದೆ. ಸಚಿವ ಮಂಕಾಳ ವೈದ್ಯ ಅವರು ಗಾಢನಿದ್ರೆಗೆ ಜಾರಿದ ಪರಿಣಾಮ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳ ಲಕ್ಷಾಂತರ ಮೀನುಗಾರರ ಪ್ರಾಣ ಅಪಾಯದಲ್ಲಿದೆ.! ಎಂದು ಬಿಜೆಪಿ ಆರೋಪಿಸಿದೆ.
ಲಾಟರಿ ಸಿಎಂ ಸಿದ್ದರಾಮಯ್ಯನವರೇ, ಮೀನುಗಾರರಿಗೆ ಲೈಫ್ ಜಾಕೆಟ್ ನೀಡದಷ್ಟು ಬಡವಾಗಿದೆಯಾ ಸರ್ಕಾರ? ಮೀನುಗಾರರ ವಿಷಯದಲ್ಲಿ ಚೆಲ್ಲಾಟ ಯಾಕೆ? ಬದುಕಿನ ಬಂಡಿ ಸಾಗಿಸಲು ಪ್ರಾಣವನ್ನೇ ಲೆಕ್ಕಿಸದೆ ಸಮುದ್ರಕ್ಕೆ ಇಳಿಯುವ ಮೀನುಗಾರರಿಗೆ ಲೈಫ್ ಜಾಕೆಟ್ ನೀಡಲು ಕೂಡಲೇ ಕ್ರಮ ಕೈಗೊಳ್ಳಿ ಎಂದು ಬಿಜೆಪಿ ಆಗ್ರಹ ಮಾಡಿದೆ.