ನವಜಾತ ಶಿಶುಗಳ ತಾಯಂದಿರ ಬಲಿಪಡೆದ ಸಿದ್ದರಾಮಯ್ಯ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಬಾಣಂತಿಯರು ಮತ್ತು ನವಜಾತ ಶಿಶುಗಳ ಸರಣಿ ಸಾವುಗಳಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವೇ ಕಾರಣ ! ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.

ಸ್ವಿಮ್ಮಿಂಗ್‌ಪೂಲ್‌ಮಿನಿಸ್ಟರ್‌ ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆಯ ಲೋಪದೋಷಗಳು, ವೈದ್ಯರ ನಿರ್ಲಕ್ಷ್ಯವನ್ನು ಕೊನೆಗೂ ಒಪ್ಪಿಕೊಂಡಿದ್ದಾರೆ.

ಬಹುಮುಖ್ಯವಾಗಿ ಶೇ.70ಕ್ಕಿಂತ ಹೆಚ್ಚು ತಾಯಂದಿರ ಸಾವುಗಳನ್ನು ತಡೆಯಬಹುದಿತ್ತು ಎಂದಿರುವ ತಜ್ಞರ ಸಮಿತಿಯ ವರದಿ “ಕೊಲೆಗಾರ ಕಾಂಗ್ರೆಸ್‌” ಸರ್ಕಾರದ ಬೇಜಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ. 

ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಭವಿಸಿರುವ 464 ಬಾಣಂತಿಯರ ಸಾವಿಗೆ ರಿಂಗರ್‌ಲ್ಯಾಕ್ಟೇಟ್ ದ್ರಾವಣದ ಸಮಸ್ಯೆ ಮಾತ್ರವಲ್ಲ, ಹಲವು ವೈಫಲ್ಯಗಳೂ ಕಾರಣ ಎಂದು ಉಲ್ಲೇಖಿಸಲಾಗಿದೆ. 2024ರ ಎಪ್ರಿಲ್‌1ರಿಂದ 2024ರ ಡಿಸೆಂಬರ್ ಅಂತ್ಯದವರೆಗೆ ಸಂಭವಿಸಿದ 464 ತಾಯಂದಿರ ಸಾವುಗಳನ್ನು ಪರೀಕ್ಷಿಸಿ ರಾಜ್ಯ ಸರ್ಕಾರಕ್ಕೆ ವಿಶ್ಲೇಷಣಾ ವರದಿ ಸಲ್ಲಿಸಲಾಗಿದೆ. 10 ಸಂದರ್ಭಗಳಲ್ಲಿ ವೈದ್ಯರ ನಿರ್ಲಕ್ಷ್ಯ ಕಂಡು ಬಂದಿದೆ ಎಂಬ ಸತ್ಯವನ್ನು ಬಹಿರಂಗಪಡಿಸಿದೆ.

 ನವಜಾತ ಶಿಶುಗಳ ತಾಯಂದಿರನ್ನು ಬಲಿಪಡೆದಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಮಗಳನ್ನು ಮತ್ತು ಮಡದಿಯನ್ನು ಕಳೆದುಕೊಂಡವರ ಶಾಪ ತಟ್ಟದೆ ಬಿಡದು ಎಂದು ಜೆಡಿಎಸ್ ಎಚ್ಚರಿಸಿದೆ.

 

 

Share This Article
error: Content is protected !!
";