ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಗಿನ್ನಿಸ್‌ದಾಖಲೆ ಮಾಡಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ವಿಧಾನಸೌಧದ ಸಚಿವರ ಕೊಠಡಿ ಪ್ರವೇಶಿಸಿದರೆ ಬರುವ “ಅಶರೀರವಾಣಿಯೇ ಕಮಿಷನ್”… 60% ಕಮಿಷನ್ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.
ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ “ಕೈ” ಸರ್ಕಾರ, ಸರ್ಕಾರಿ ಕಾಮಗಾರಿಗಳಲ್ಲಿ 60% ಕಿಕ್‌ಬ್ಯಾಕ್‌ಪಡೆಯುವುದರಲ್ಲಿ ಮುಂಚೂಣಿಯಲ್ಲಿದೆ ಎಂದು ಜೆಡಿಎಸ್ ಆರೋಪಿಸಿದೆ.
ಬಲಗೈನಲ್ಲಿ ಸಂವಿಧಾನ ಪುಸ್ತಕ ಹಿಡಿದು, ಎಡಗೈನಲ್ಲಿ ಕಮಿಷನ್‌ಪಡೆಯುತ್ತಿರುವ ಮಂತ್ರಿಗಳ ಧನದಾಹದ ವಿರುದ್ಧ ಗುತ್ತಿಗೆದಾರರ ಸಂಘ ಸಿಡಿದೆದ್ದಿದ್ದು, ಗೌರವಾನ್ವಿತ ರಾಜ್ಯಪಾಲರಿಗೆ ಹಾಗೂ ಕಾಂಗ್ರೆಸ್‌ಹೈಕಮಾಂಡ್‌ಗೆ ದೂರು ನೀಡಿದೆ ಎಂದು ಜೆಡಿಎಸ್ ತಿಳಿಸಿದೆ.
60% ಕಮಿಷನ್ ಲೂಟಿ ಹೊಡೆಯುತ್ತಿರುವ ಭ್ರಷ್ಟ ಕಾಂಗ್ರೆಸ್‌ಸರ್ಕಾರದಿಂದ ರಾಜ್ಯಕ್ಕೆ ಹಾಗೂ ಜನರಿಗೆ ಉಳಿಗಾಲ ಇಲ್ಲ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.