ಅಪ್ಪಿತಪ್ಪಿಯೂ ಡಿಕೆಶಿಗೆ ಸಿಎಂ ಹುದ್ದೆ ಸಿಗಬಾರದೆಂದು ಪಕ್ಕಾ ಪ್ಲ್ಯಾನ್ ಮಾಡಿರುವ ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಪ್ಪಂದದ ಮೇರೆಗೆ ಸಿಎಂ ಕುರ್ಚಿ ಅಲಂಕರಿಸಿರುವ ಸಿದ್ದರಾಮಯ್ಯ ಅವರು ತಮ್ಮ ನಂತರದ ಸಿಎಂ ಹುದ್ದೆ ಅಪ್ಪಿತಪ್ಪಿಯೂ ಡಿಕೆಶಿಗೆ ಸಿಗಬಾರದೆಂದು ಪಕ್ಕಾ ಪ್ಲ್ಯಾನ್ ಮಾಡಿದಂತೆ ಭಾಸವಾಗುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಸರ್ಕಾರದಲ್ಲಿ ಈಗ ಗುಂಪು ರಾಜಕಾರಣ ಆರಂಭವಾಗಿದೆ.‌ಒಬ್ಬೊಬ್ಬ ನಾಯಕರು ತಾನು ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಾ ಕಿತ್ತಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ವಿದೇಶಿ ಪ್ರವಾಸದಲ್ಲಿದ್ದಾಗ ಡಿನ್ನರ್ ಮೀಟಿಂಗ್ ಹೆಸರಿನಲ್ಲಿ ಡಿಕೆಶಿಗೆ ಹಳ್ಳ ತೋಡುವ ಕೆಲಸವನ್ನು ಸಿದ್ದರಾಮಯ್ಯ ಅವರು ಮಾಡಿದ್ದಾರೆ. ಪರಮೇಶ್ವರ್ ಅವರು ತಮ್ಮ ನೇತೃತ್ವದಲ್ಲಿ ಒಂದು ಡಿನ್ನರ್ ಮೀಟಿಂಗ್ ನಡೆಸಲು ಸಜ್ಜಾಗಿದ್ದಾರೆ.

ಜಾರಕಿಹೊಳಿ ಅಂತೂ ಸೂಕ್ಷ್ಮವಾಗಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ತಾನೇ ಎಂಬ ಸಂದೇಶವನ್ನು ರವಾನಿಸಿ ಸಿಎಂ ಪದವಿ ಮೇಲೆ ಕಣ್ಣಿಟ್ಟಿರುವ ಡಿಕೆಶಿಗೆ ಸಂದೇಶವನ್ನು ರವಾನಿಸಿದ್ದಾರೆ.

ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಹೋರಾಟ, ಗುದ್ದಾಟಗಳು ಅಂತಿಮ ಹಂತದಲ್ಲಿದ್ದು,‌ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣದ ನಾಯಕರು ದೆಹಲಿ ನಾಯಕರಿಗೆ ಎಡತಾಕುತ್ತಿದ್ದಾರೆ. ಡಿ. ಕೆ. ಶಿವಕುಮಾರ್ ಅವರು ಸಿಎಂ ಕುರ್ಚಿ ಏರಲು ಹೋರಾಡಿದರೆ, ಸಿದ್ದರಾಮಯ್ಯ ಅವರು ಸಿಎಂ ಕುರ್ಚಿ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ Vs ಕಾಂಗ್ರೆಸ್ ಕಿತ್ತಾಟದಲ್ಲಿ ರಾಜ್ಯ ಬಡವಾಗುತ್ತಿದೆ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.

 

- Advertisement -  - Advertisement - 
Share This Article
error: Content is protected !!
";