ಸಿದ್ದರಾಮಯ್ಯ ಅವರೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮರ್ಯಾದೆಯಿಂದ ನಿರ್ಗಮಿಸಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೇನಾಮಿರಾಮಯ್ಯ”ನ ಭ್ರಷ್ಟಾಚಾರದ ಬಳ್ಳಿ ರಾಜ್ಯವ್ಯಾಪಿ ಹಬ್ಬಿದೆ ಎಂದು ಜೆಡಿಎಸ್ ಆರೋಪಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಕ್ರಮಗಳ “ಕೈ”ನ ಆಳ-ಅಗಲ ಇಂಚಿಂಚು ಬಟ ಬಯಲಾಗುತ್ತಲೇ ಇದೆ.

ಮುಡಾ ಹಗರಣದ A1 ಆರೋಪಿ ಸಿದ್ದರಾಮಯ್ಯ ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್‌ಮೇಲೆ ರಾಜಕೀಯ ಪ್ರಭಾವ ಬೀರಿ, ಪತ್ನಿ ಪಾರ್ವತಿ ಹೆಸರಲ್ಲಿ ಅಕ್ರಮವಾಗಿ 14 ನಿವೇಶನಗಳನ್ನು ಪಡೆದಿದ್ದಾರೆ ಎಂದು ಇ.ಡಿ. ಸತ್ಯ ಹೊರಹಾಕಿದೆ.  

- Advertisement - 

ಮುಡಾ ಪ್ರಕರಣದ ತನಿಖೆಯ ಭಾಗವಾಗಿ ಸುಮಾರು 300 ಕೋಟಿ ರೂ. ಮೌಲ್ಯದ 142 ಸ್ಥಿರಾಸ್ತಿಗಳನ್ನು ಇ.ಡಿ. ಮುಟ್ಟುಗೋಲು ಹಾಕಿಕೊಂಡಿದೆ. 50:50ರ ಅನುಪಾತದಲ್ಲಿ ಅಕ್ರಮವಾಗಿ 1094 ನಿವೇಶನಗಳನ್ನು ಅಕ್ರಮವಾಗಿ ಬೇನಾಮಿ ಹೆಸರಲ್ಲಿ ಹಂಚಿಕೆ ಮಾಡಿ ನೂರಾರು ಕೋಟಿ ಲಾಭ ಮಾಡಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಉಲ್ಲೇಖಿಸಿರುವುದು, ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಸತ್ಯ ಎನ್ನುವುದು ಮತ್ತೆ ಸಾಬೀತಾಗಿದೆ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.

ಹಗರಣದಲ್ಲಿ ನನ್ನ ಪಾತ್ರ ಏನಿಲ್ಲ ಎಂದು ವೈಟ್ನರ್‌ಹಚ್ಚಿ, ತಿಪ್ಪೆಸಾರುತ್ತಿದ್ದ ಮುಡಾರಾಮಯ್ಯ ಅವರೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮರ್ಯಾದೆಯಿಂದ ನಿರ್ಗಮಿಸಿ ಎಂದು ಜೆಡಿಎಸ್ ತಾಕೀತು ಮಾಡಿದೆ.

- Advertisement - 

 

Share This Article
error: Content is protected !!
";