ಭ್ರಷ್ಟರಿಗೆ ರೋಲ್‌ಮಾಡೆಲ್‌ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟರಿಗೆ ರೋಲ್‌ಮಾಡೆಲ್‌ಆಗಿರುವ A1 IPC 420 ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಲ್ಮೀಕಿ ನಿಗಮದಲ್ಲಿ ಕೋಟಿ ಕೋಟಿ ಲೂಟಿ ಹೊಡೆದು ಜೈಲಿಗೆ ಹೋಗಿ ಬೇಲ್‌ಮೇಲೆ ಹೊರ ಬಂದಿರುವ ಭ್ರಷ್ಟ ನಾಗೇಂದ್ರಗೆ ಮತ್ತೆ ಮಂತ್ರಿ ಗಿರಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

- Advertisement - 

ಭ್ರಷ್ಟರ ಪಕ್ಷ ಕಾಂಗ್ರೆಸ್ ಪಕ್ಷದಲ್ಲಿ ಜೈಲಿಗೆ ಹೋಗಿ ಬೇಲ್‌ಮೇಲೆ ಬಂದವರಿಗೆ ರಾಜಾತಿಥ್ಯ ಗ್ಯಾರಂಟಿ. ಜೈಲಿಗೆ ಹೋಗಿ ಬಂದಮೇಲೆಯೇ ಡಿ.ಕೆ.ಶಿವಕುಮಾರ್  ಅವರಿಗೆ ಕಾಂಗ್ರೆಸ್‌ರಾಜ್ಯಾಧ್ಯಕ್ಷಗಿರಿ, ಡಿಸಿಎಂ ಪಟ್ಟ ಸಿಕ್ಕಿದೆ ಎಂದು ಬಿಜೆಪಿ ಟ್ವೀಟ್ ಮಾಡಿ ವಾಗ್ದಾಳಿ ಮಾಡಿದೆ.

- Advertisement - 

 ದೇಶವನ್ನು ಲೂಟಿ ಮಾಡುವುದಕ್ಕೆ ಕಾಂಗ್ರೆಸ್ ಗೆ ಭ್ರಷ್ಟಾಸುರರೇಬೇಕು. ನಾಗೇಂದ್ರ ಅವರು ಮತ್ತೆ ಸಚಿವರಾದರೆ, ವಾಲ್ಮೀಕಿ ನಿಗಮವೇ ಇಲ್ಲದಂತೆ ನಾಪತ್ತೆ ಆಗುವುದು ಗ್ಯಾರಂಟಿ ಎಂದು ಬಿಜೆಪಿ ಆತಂಕ ವ್ಯಕ್ತ ಪಡಿಸಿದೆ.

 

- Advertisement - 

 

 

Share This Article
error: Content is protected !!
";