ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಡಾ ನಿವೇಶನ ಹಂಚಿಕೆ ವಿಷಯದಲ್ಲಿ ಅಧಿಕಾರದಲ್ಲಿದ್ದಾಗ ತಾವೇ ನಿವೇಶನ ಹಂಚಿದ್ದ ಬಿಜೆಪಿ ಪಕ್ಷ ನಂತರ ಹಗರಣ ನಡೆದಿದೆ ಎಂದು ಬಿಂಬಿಸಿ, ನನ್ನ ವಿರುದ್ಧ ಕುತಂತ್ರದ ಹೋರಾಟ ನಡೆಸಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ರಾಜ್ಯ ಬಿಜೆಪಿ ನಾಯಕರ ಈ ಕುತಂತ್ರದ ಜೊತೆ ಷಾಮೀಲಾದ ಕೇಂದ್ರ ಸರ್ಕಾರ ಇ.ಡಿ ತನಿಖಾ ಸಂಸ್ಥೆಯ ಮೂಲಕ ನನ್ನ ಕುಟುಂಬಕ್ಕೆ ಕಿರುಕುಳ ನೀಡುವ ಪ್ರಯತ್ನ ನಡೆಸಿತು. ನ್ಯಾಯಾಲಯದ ತೀರ್ಪಿನಿಂದಾಗಿ ನನ್ನ ಕುಟುಂಬದ ವಿರುದ್ಧದ ಎಲ್ಲಾ ರಾಜಕೀಯ ಕುತಂತ್ರಗಳು ನಿಷ್ಪಲಗೊಂಡು ಸತ್ಯ ಗೆದ್ದಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ದೂರು ದಾಖಲಾದ ದಿನದಿಂದ ಹಿಡಿದು ಇಲ್ಲಿಯ ವರೆಗೆ ಕಾನೂನಿನ ಹೋರಾಟವನ್ನು ನನ್ನ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ನಿಭಾಯಿಸಿದರು ಎಂದು ಸಿಎಂ ತಿಳಿಸಿದರು.

